Home Crime ಬಂಟ್ವಾಳ: ತೋಟದಲ್ಲಿ ಹುಲ್ಲು ತೆಗೆಯಲು ಹೋದ ವೃದ್ಧೆ ಹೆಜ್ಜೇನು ಕಡಿತದಿಂದ ಸಾವು‌‌…!!

ಬಂಟ್ವಾಳ: ತೋಟದಲ್ಲಿ ಹುಲ್ಲು ತೆಗೆಯಲು ಹೋದ ವೃದ್ಧೆ ಹೆಜ್ಜೇನು ಕಡಿತದಿಂದ ಸಾವು‌‌…!!

ಬಂಟ್ವಾಳ: ತೋಟದಲ್ಲಿ ಕೃಷಿ ಕೆಲಸಕ್ಕೆ ಹೋದ ವೃದ್ಧೆಯೊಬ್ಬರಿಗೆ ಹೆಜ್ಜೇನು ಕಡಿತದಿಂದ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಬಿ. ಕಸಬಾ ಗ್ರಾಮದಲ್ಲಿ ಸಂಭವಿಸಿದೆ

ಕೆಮ್ಮಟ್ಟೆಗುಡ್ಡೆ ನಿವಾಸಿ ದಿನೇಶ್ (50) ಅವರ ತಾಯಿ ಮಂಗಳವಾರ ಬೆಳಿಗ್ಗೆ 9:30ಕ್ಕೆ ಮನೆಯ ಪಕ್ಕದ ಅಡಿಕೆ ತೋಟದಲ್ಲಿ ಹುಲ್ಲು ತೆಗೆಯಲು ಮತ್ತು ಕೃಷಿ ಕೆಲಸಕ್ಕೆ ಹೋಗಿದ್ದರು.

ಮಧ್ಯಾಹ್ನ ಸುಮಾರು 11 ಗಂಟೆಗೆ ಮನೆಗೆ ಬಂದ ಅವರು, ತೋಟದಲ್ಲಿ ಹೆಜ್ಜೇನು ಕಡಿದಿದೆ ಎಂದು ಮಗನಿಗೆ ತಿಳಿಸಿದ್ದಾರೆ. ತಕ್ಷಣ ಮಗ ಅವರನ್ನು ಬಂಟ್ವಾಳದ ಖಾಸಗಿ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.

ಮನೆಗೆ ವಾಪಸ್ಸಾದ ಬಳಿಕ ಮಧ್ಯಾಹ್ನ 1:30ಕ್ಕೆ ಅವರು ಮಾತನಾಡದೆ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಂಬ್ಯುಲೆನ್ಸ್ ಮೂಲಕ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಪರೀಕ್ಷಿಸಿದ ವೈದ್ಯರು ಮಧ್ಯಾಹ್ನ 2:55ಕ್ಕೆ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆ UDR 29/2026 ಕಲಂ 194 BNSS ರಂತೆ ಪ್ರಕರಣ ದಾಖಲಾಗಿದೆ.