Home Crime ಕಡಬ: ಎರ್ಮಾಳ ರಕ್ಷಿತಾರಣ್ಯದಲ್ಲಿ ವ್ಯಕ್ತಿ ನೇಣಿಗೆ ಶರಣು…!!

ಕಡಬ: ಎರ್ಮಾಳ ರಕ್ಷಿತಾರಣ್ಯದಲ್ಲಿ ವ್ಯಕ್ತಿ ನೇಣಿಗೆ ಶರಣು…!!

ಕಡಬ : ಪೆರಾಬೆ ಗ್ರಾಮದ ಕೋಡಿಯಡ್ಕ ನಿವಾಸಿ ದಿ.ಕುಂಞಣ್ಣ ಗೌಡ ಅವರ ಪುತ್ರ ಶೇಖರ ಗೌಡ(43ವ.)ಅವರು ಎರ್ಮಾಳ ರಕ್ಷಿತಾರಣ್ಯದಲ್ಲಿ ಉಟ್ಟ ಬಟ್ಟೆಯಿಂದ ನೇಣು ಬಿಗಿದುಕೊಂಡಿದ್ದಾರೆ.

ಸೆ.17ರ ರಾತ್ರಿಯೇ ಮನೆಯಿಂದ ತನ್ನ ಸ್ಕೂಟಿಯಲ್ಲಿ ಹೊರಟಿದ್ದ ಶೇಖರ ಗೌಡ ಅವರು ಸ್ಕೂಟಿಯನ್ನು ಸಂಬಂಧಿಕರೋರ್ವರ ಮನೆಯಲ್ಲಿ ಇಟ್ಟು ಕಾಡಿಗೆ ತೆರಳಿ ನೇಣಿಗೆ ತಲೆ ಒಡ್ಡಿದ್ದಾರೆ.

ಬೆಳಿಗ್ಗೆ ಸ್ಥಳೀಯರು ಹುಡುಕಾಟ ನಡೆಸಿದ್ದು ಮರದ ಕೊಂಬೆಯಲ್ಲಿ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳು ಸಹೋದರರನ್ನು ಅಗಲಿದ್ದಾರೆ.