Home Crime ಪುತ್ತೂರು: ಮನೆಯಂಗಳದಲ್ಲಿ ವಾಹನ ತೊಳೆಯುತ್ತಿದ್ದ ಯುವಕ ವಿದ್ಯುತ್ ಶಾಕ್‌ಗೆ ಬಲಿ…!!

ಪುತ್ತೂರು: ಮನೆಯಂಗಳದಲ್ಲಿ ವಾಹನ ತೊಳೆಯುತ್ತಿದ್ದ ಯುವಕ ವಿದ್ಯುತ್ ಶಾಕ್‌ಗೆ ಬಲಿ…!!

ಪುತ್ತೂರು: ಮನೆಯಂಗಳದಲ್ಲಿ ಯಂತ್ರದ ಮೂಲಕ ವಾಹನ ತೊಳೆಯುತ್ತಿದ್ದ ಯುವಕನೊಬ್ಬ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಶುಕ್ರವಾರ ಪುತ್ತೂರು ನಗರದ ಹೊರವಲಯದ ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ಸಮೀಪದ ಬಡಾವು ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ಬಡಾವು ನಿವಾಸಿ ಈಶ್ವರ ನಾಯ್ಕ ಅವರ ಪುತ್ರ ರಕ್ಷಿತ್ (29) ಎಂದು ಗುರುತಿಸಲಾಗಿದೆ.

ರಕ್ಷಿತ್ ಅವರು ಪುತ್ತೂರು ನಗರದ ಮೆಡಿಕಲ್ ಸೆಂಟರ್‌ನಲ್ಲಿ ಉದ್ಯೋಗಿಯಾಗಿದ್ದರು ಎಂದು ತಿಳಿದುಬಂದಿದೆ.

ಮನೆಯ ಅಂಗಳದಲ್ಲಿ ಯಂತ್ರದ ಸಹಾಯದಿಂದ ವಾಹನ ತೊಳೆಯುತ್ತಿದ್ದ ವೇಳೆ ವಿದ್ಯುತ್ ಆಘಾತ ಸಂಭವಿಸಿ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿದ್ಯುತ್ ಶಾಕ್‌ನಿಂದಲೇ ಸಾವು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.

ಘಟನೆಯ ಮಾಹಿತಿ ತಿಳಿದು ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.