Home Crime ಕಾರ್ಕಳ: ರಸ್ತೆ ಅಪಘಾತ : ವೃದ್ಧ ಮೃತ್ಯು…!!

ಕಾರ್ಕಳ: ರಸ್ತೆ ಅಪಘಾತ : ವೃದ್ಧ ಮೃತ್ಯು…!!

ಕಾರ್ಕಳ: ಮುಂಡ್ಕೂರು–ಬೆಳ್ಮಣ್ ರಾಜ್ಯ ಹೆದ್ದಾರಿಯಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ 73 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮುಲ್ಲಡ್ಕ ಗ್ರಾಮದ ಕೊಡಿಮಾರಿನಲ್ಲಿ ನಡೆದಿದೆ.

ಮೃತರನ್ನು ವಸಂತ ಮೂಲ್ಯ (73) ಎಂದು ಗುರುತಿಸಲಾಗಿದೆ.

ಸೆಪ್ಟೆಂಬರ್ 18ರಂದು ಸಂಜೆ ಕೊಡಿಮಾರು ಬಸ್ ನಿಲ್ದಾಣದಲ್ಲಿ ಬಸ್‌ನಿಂದ ಇಳಿದ ವಸಂತ ಮೂಲ್ಯ ಅವರು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.

ಈ ವೇಳೆ ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆಗೆ ತೆರಳುತ್ತಿದ್ದ KL-84-A-6856 ನೋಂದಣಿಯ ಸ್ವಿಫ್ಟ್ ಕಾರು, ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿ ಹಿಂಬದಿಯಿಂದ ವಸಂತ ಮೂಲ್ಯ ಅವರಿಗೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ