Home Crime ಪುತ್ತೂರು: ಪೊಲೀಸರ ಮೇಲೆ ಹಲ್ಲೆ, ಇಬ್ಬರು ಆಸ್ಪತ್ರೆಗೆ ದಾಖಲು..!!

ಪುತ್ತೂರು: ಪೊಲೀಸರ ಮೇಲೆ ಹಲ್ಲೆ, ಇಬ್ಬರು ಆಸ್ಪತ್ರೆಗೆ ದಾಖಲು..!!

ಪುತ್ತೂರು: ಕೌಟುಂಬಿಕ ಕಲಹ ಕುರಿತು ಬಂದ ದೂರಿನ ಮೇರೆಗೆ ವಿಚಾರಣೆಗೆ ಮನೆಗೆ ಹೋಗಿದ್ದ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ಸೆ.4 ರಂದು ರಾತ್ರಿ ಪಡ್ನೂರಿನಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಹಲ್ಲೆಯಿಂದ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೆಚ್ಚಿನ ಮಾಹಿತಿ ಕುರಿತು ಇನ್ನಷ್ಟೇ ವಿವರ ತಿಳಿದು ಬರಬೇಕಿದೆ.