Home Crime ಕುಡಿತದ ಚಟ ಯುವಕ ಆತ್ಮಹತ್ಯೆ…!!

ಕುಡಿತದ ಚಟ ಯುವಕ ಆತ್ಮಹತ್ಯೆ…!!

ಅಜೆಕಾರು: ಅತಿಯಾದ ಮದ್ಯಪಾನದ ಚಟ ಹೊಂದಿದ್ದ ಕಾರ್ಮಿಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೊಂಡೆರಗಂಡಿ ಬಳಿ ನಡೆದಿದೆ.

ಕಾರ್ತಿಕೇಯನ್ (28) ಮೃತಪಟ್ಟವರು. ಇವರು ಕಳೆದ ಎರಡು ವರ್ಷಗಳಿಂದ ಸ್ಥಳೀಯ ಮನೋಜ್ ಎಂಬುವವರ ಪ್ರಭಾ ಆರ್ಟ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದರು.

ಆಗಸ್ಟ್ 31ರಂದು ಕೆಲಸಕ್ಕೆ ರಜೆ ಹಾಕಿದ್ದ ಕಾರ್ತಿಕೇಯನ್ ಅಂದು ರಾತ್ರಿ 9.30ಕ್ಕೆ ಊಟ ಮುಗಿಸಿ ಪ್ರಭಾ ಆರ್ಟ್ಸ್ ಬಳಿ ಇರುವ ತಮ್ಮ ಕೊಠಡಿಗೆ ತೆರಳಿದ್ದರು. ಮರುದಿನ (ಸೆ.1) ಬೆಳಿಗ್ಗೆ 8.15ರ ಸುಮಾರಿಗೆ ಸಹೋದ್ಯೋಗಿ ಕೊಠಡಿಯ ಬಳಿ ತೆರಳಿ ಕರೆದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಅನುಮಾನಗೊಂಡು ಬಾಗಿಲು ತಳ್ಳಿ ನೋಡಿದಾಗ ಕೊಠಡಿಯ ಅಡ್ಡಗೋಡೆಗೆ ಅಳವಡಿಸಲಾಗಿದ್ದ ಕಬ್ಬಿಣದ ಪೈಪಿಗೆ ನೈಲಾನ್ ಬಟ್ಟೆಯಿಂದ ಕುತ್ತಿಗೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ವಿಪರೀತ ಮದ್ಯಪಾನ ಮಾಡುವ ಅಭ್ಯಾಸವೇ ಈ ದುಡುಕಿನ ನಿರ್ಧಾರಕ್ಕೆ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಸಹೋದ್ಯೋಗಿ ನಾಗೇಶ್ ನೀಡಿದ ದೂರಿನ ಮೇರೆಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.