ಬೆಂಗಳೂರು: ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೂತನ ಸಚಿವರಾದ ಶಿವರಾಜ್ ತಂಗಡಗಿರವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಶ್ರೀ ರವಿಕುಮಾರ್ , ಉಡುಪಿ ಜಿಲ್ಲಾ ಭೋವಿ – ವಡ್ಡರ್ ಮುಖಂಡರುಗಳಾದ ನಾರಯಣ ಪರ್ಕಳ, ಶಿವಕುಮಾರ್ ಪರ್ಕಳ, ಮುರಳಿ ಕೊಡಂಕೂರು ಉಪಸ್ಥಿತರಿದ್ದರು,
ಜಿಲ್ಲೆಯಲ್ಲಿ ಜನಾಂಗದವರಿಗೆ ಜಾತಿ ಪ್ರಮಾಣ ಪತ್ರದ ಸಮಸ್ಯೆಗಳ ಬಗ್ಗೆ ಸಚಿವರಲ್ಲಿ ಮನವಿ ನೀಡಲಾಯಿತು ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಶ್ರೀ ಕೆ. ಮುನಿಯಪ್ಪ ಇವರೋಂದಿಗೆ ಇಲಾಖಾ ಸಭೆ ನಡೆಸಿ ಸೂಕ್ತ ಸಮಸ್ಯೆ ಪರಿಹರಿಸುವ ಬಗ್ಗೆ ಭರವಸೆ ನೀಡಿದರು.






