Home Latest ಉಡುಪಿ: ರಜನಿಕಾಂತ್ ತಂತ್ರಿ ಮಾರ್ಪಳ್ಳಿ ನಿಧನ…!!

ಉಡುಪಿ: ರಜನಿಕಾಂತ್ ತಂತ್ರಿ ಮಾರ್ಪಳ್ಳಿ ನಿಧನ…!!

ಉಡುಪಿ: ಕುಕ್ಕಿಕಟ್ಟೆ ಶಾಲೆಯ ನಿವೃತ್ತ ಶಿಕ್ಷಕರಾದ ದಿ. ಶ್ರೀಪತಿ ತಂತ್ರಿಯವ ಎರಡನೇ ಪುತ್ರ ರಜನಿಕಾಂತ್ ತಂತ್ರಿ (45) ಅವರು ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ.

ಮಾರ್ಪಳ್ಳಿ ನಿವಾಸಿಯಾದ ರಜನಿಕಾಂತ್ ತಂತ್ರಿಯವರು ಸಕ್ಕರೆ ಖಾಯಿಲೆಂದ ಬಳಲುತ್ತಿದ್ದರು. ಕಳೆದ ರಾತ್ರಿ ಮನೆಯಲ್ಲಿ ತೀವ್ರ ಅಸ್ವಸ್ಥತರಾಗಿದ್ದರು.

ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು. ಮೃತರು ಪತ್ನಿ, ತಾಯಿ ನಿವೃತ್ತ ಶಿಕ್ಷಕಿ ಪ್ರಫುಲ್ಲ, ಸಹೋದರ ಶಶಿಕಾಂತ್ ತಂತ್ರಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.