ನಮ್ಮ ತುಳುನಾಡಿನ ಬಾಲಪ್ರತಿಭೆ…
ಉಡುಪಿ : ಸಚಿತ ರಾವ್ ಉಡುಪಿ ಪುತ್ತೂರಿನ ನಿವಾಸಿ ಸಚಿನ್ ರಾವ್ ಹಾಗೂ ಅಶ್ವಿನಿ ರಾವ್ ಅವರ ಪುತ್ರಿ ಉಡುಪಿಯ ಸಿಲಾಸ್ ಇಂಟರ್ನ್ಯಾಷನಲ್ ಶಾಲೆಯಲ್ಲಿ 7 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಚಿತ ರಾವ್ ಫ್ಯಾಷನ್ ಲೋಕದಲ್ಲಿ ಅಭೂತ ಪೂರ್ವ ಸಾಧನೆ ಮಾಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದರೆ ಹಾಗೂ ಕರಾವಳಿಯ ಸಂಸ್ಕೃತಿಕ ನಗರಿ ಉಡುಪಿ – ಕರ್ನಾಟಕ ಹಾಗೂ ಭಾರತ ದೇಶಕ್ಕೆ ಕೀರ್ತಿ ತಂದಿರುತ್ತಾರೆ. ಸಚಿತ ರಾವ್ ಸಾಧನೆ ಕೇವಲ ಒಂದು ಸ್ಪರ್ಧೆ ಗೆ ಸೀಮಿತವಾಗಿರದೆ ಇವರೆಗೆ ಅವರು 8 ವಿವಿಧ ಫ್ಯಾಷನ್ ಶೋ ಗಳಲ್ಲಿ ಭಾಗವಹಿಸಿ, ವಿಶೇಷ ವೆಂದರೆ ಎಲ್ಲಾ 8 ಸ್ಪರ್ಧೆಗಳಲ್ಲೂ ಪ್ರಶಸ್ತಿ ಮೂಡಿಗೆರಿಸಿಕೊಂಡ ಅಪರೂಪದ ದಾಖಲೆ ಬರೆದಿದ್ದಾರೆ.
ಆಗಸ್ಟ್ 19 ರಿಂದ 22 ರ ವರೆಗೆ ಥೈಲ್ಯಾಂಡ್ ನಲ್ಲಿ ನಡೆದ ಅಂತರಾಷ್ಟೀಯ ಮಟ್ಟದ ಜೂನಿಯರ್ ಮಾಡೆಲ್ ಇಂಟರ್ನ್ಯಾಷನಲ್ 2026ರ ಫೈನಲ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಸಚಿತ ರಾವ್, ವಿವಿಧ ದೇಶದಿಂದ ಭಾಗವಹಿಸಿದ ಸ್ಪರ್ದಿಗಳಿಗೆ ತೀವ್ರ ಪೈಪೋಟಿ ನೀಡಿದ ಸಚಿತ ರಾವ್ ಅಂತಿಮವಾಗಿ ಮೊದಲ ಪ್ರಶಸ್ತಿ ಜೊತೆಗೆ ಕಿರೀಟವನ್ನು ತನ್ನದಾಗಿಸಿದರು.
ಇವರ ನಿರಂತರ ಪರಿಶ್ರಮ ಹಾಗೂ ವೇದಿಕೆ ಮೇಲಿನ ಆತ್ಮವಿಶ್ವಾಸ ಇಂದು ಇವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡು ಹೋಗಿದೆ. ಥೈಲ್ಯಾಂಡ್ ನಿಂದ ಆಗಮಿಸಿದ ಅವರನ್ನು ಉಡುಪಿಯ ಶಾಸಕರು ಯಶಪಲ್ ಸುವರ್ಣ, ಡಾ. ಜಿ ಶಂಕರ್, ರಘುಪತಿ ಭಟ್, ಪ್ರಮೋದ್ ಮಧ್ವರಾಜ್, ಕರ್ನಾಟಕ ರಕ್ಷಣಾ ವೇದಿಕೆ, ಕೆ ಕೃಷ್ಣ ಮೂರ್ತಿ ಆಚಾರ್ಯ, ಯುವರಾಜ್ ಪುತ್ತೂರು ಹಾಗೂ ಓಂಕಾರೇಶ್ವರ ಭಜನಾ ದೇಗುಲ ದ ಸದಸ್ಯರು ಸ್ವಾಗತಿಸಿದರು.








