Home Crime ಹೆಬ್ರಿ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೂಲಿ ಕಾರ್ಮಿಕ ನಿಗೂಢವಾಗಿ ನಾಪತ್ತೆ…!!

ಹೆಬ್ರಿ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕೂಲಿ ಕಾರ್ಮಿಕ ನಿಗೂಢವಾಗಿ ನಾಪತ್ತೆ…!!

ಹೆಬ್ರಿ : ಕೂಲಿ ಕೆಲಸಕ್ಕೆಂದು ಬಸ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಮಾರ್ಗ ಮಧ್ಯೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಮುನಿಯಾಲು ಬಳಿ ನಡೆದಿದೆ.

ನಾಪತ್ತೆಯಾದವರನ್ನು ಭರಮಪ್ಪ ಹನಮಂತಪ್ಪ ಗೋಡೆ ಎಂದು ಗುರುತಿಸಲಾಗಿದೆ.

ದೂರುದಾರ ಗಣೇಶಪ್ಪ ದಮ್ಮನಾಳ (55), ಘಾಳಪೂಜಿ ಪ್ಲಾಟ್, ಮುತ್ತಲಪುರ, ಬ್ಯಾಡಗಿ ನಿವಾಸಿ, ತನ್ನ ಸ್ನೇಹಿತ ಭರಮಪ್ಪ ಜೊತೆ ಕೂಲಿ ಕೆಲಸದ ನಿಮಿತ್ತ ಹೆಬ್ರಿಯಿಂದ ಕಾರ್ಕಳಕ್ಕೆ ಬಸ್‌ನಲ್ಲಿ ಹೊರಟಿದ್ದರು. ಮುನಿಯಾಲು ಸಮೀಪ ತಲುಪಿದಾಗ ಭರಮಪ್ಪ ಬಸ್‌ನಲ್ಲಿ ಇಲ್ಲದಿರುವುದು ಗಮನಕ್ಕೆ ಬಂದಿದೆ.

ಕೂಡಲೇ ಬಸ್ ಕಂಡಕ್ಟರ್‌ರನ್ನು ವಿಚಾರಿಸಿದಾಗ, ಮುದ್ರಾಡಿ ಗ್ರಾಮದ ಭಕ್ರೆ ಕ್ರಾಸ್ ಬಳಿ ಭರಮಪ್ಪ ಬಸ್‌ನಿಂದ ಇಳಿದಿರುವುದಾಗಿ ತಿಳಿದುಬಂದಿದೆ. ನಂತರ ಸ್ನೇಹಿತರು ಮತ್ತು ಕುಟುಂಬದವರು ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿಲ್ಲ.

ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣವಾಗಿ ಅಪರಾಧ ಕ್ರಮಾಂಕ 54/2026ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.