Home Crime ಉಡುಪಿ : ಮನನೊಂದು ಹೈಸ್ಕೂಲ್ ವಿದ್ಯಾರ್ಥಿ ಆತ್ಮಹತ್ಯೆ….!!

ಉಡುಪಿ : ಮನನೊಂದು ಹೈಸ್ಕೂಲ್ ವಿದ್ಯಾರ್ಥಿ ಆತ್ಮಹತ್ಯೆ….!!

ಉಡುಪಿ : ನಗರದ ಹೊರವಲಯ ಬೀಡಿನಗುಡ್ಡೆ ಎಂಬಲ್ಲಿ ತಾಯಿ ಬೈದ ಕಾರಣಕ್ಕೆ ಮನನೊಂದ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.19ರಂದು ಬೆಳಗ್ಗೆ ನಡೆದಿದೆ.

ಮೃತರನ್ನು ಉತ್ತರ ಕರ್ನಾಟಕ ಮೂಲದ ಉಡುಪಿ ಬೀಡಿನಗುಡ್ಡೆ ನಿವಾಸಿ ಗಂಗಮ್ಮ ಎಂಬವರ ಮಗಳು ಭರ್ಮವ್ವ (15) ಎಂದು ಗುರುತಿಸಲಾಗಿದೆ.

ಕಾಲು ಗೆಜ್ಜೆ ಕಳೆದು ಹೋಗಿದೆ ಎಂದು ತಾಯಿಗೆ ಕರೆ ಮಾಡಿ ತಿಳಿಸಿದ್ದು, ಅದಕ್ಕೆ ತಾಯಿ ಬೈದಿದ್ದಾರೆ ಎನ್ನಲಾಗಿದೆ. ಇದೇ ಚಿಂತೆಯಲ್ಲಿ ಮನನೊಂದ ಭುರ್ಮವ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.