ಕಾರ್ಕಳ : ಯಕ್ಷ ಧ್ರುವ ಪಟ್ಲ ಪೌಂಡೇಶನ್ ಪಳ್ಳಿ ನಿಂಜೂರು ಘಟಕದ 7ನೇ ವರ್ಷದ ವಾರ್ಷಿಕೋತ್ಸವ, ಇದೇ ಬರುವ ಮಾರ್ಚ್ 7ರಂದು ಪಳ್ಳಿ ರಾಮಕೃಷ್ಣ ಸಭಾಭವನ ದಲ್ಲಿ ನಡೆಯಲಿದೆ ಇದರ ಆಮಂತ್ರಣ ಪತ್ರಿಕೆಯನ್ನು ನಿಂಜೂರು ಕಾರಣಿಕದ ಕ್ಷೇತ್ರ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮೂಕ್ತೇಸರರಾದ ರಘುರಾಮ್ ಭಂಡಾರಿ ನಿಂಜೂರು, ಹಾಗೂ ಪಳ್ಳಿ ಯಕ್ಷ ಧ್ರುವ ಪಟ್ಲ ಪೌಂಡೇಶನನ ಗೌರವ ಅಧ್ಯಕ್ಷರು ನವೀನ್ ಶೆಟ್ಟಿ ನಿಂಜೂರು, ಅಧ್ಯಕ್ಷರು ಸುನಿಲ್ ಬಿ. ಶೆಟ್ಟಿ ಪಳ್ಳಿ, ಸಂಚಾಲಕರು ಸುನಿಲ್ ಎ. ಕೋಟ್ಯಾನ್ ಪಳ್ಳಿ, ಚಂದ್ರಹಾಸ ಶೆಟ್ಟಿ ನಿಂಜೂರು, ಗೌರೀಶ್ ಶೆಟ್ಟಿ ನಿಂಜೂರು, ಸಂತೋಷ ಶೆಟ್ಟಿ ನಿಂಜೂರು ರಾಮನಾಥ್ ಕಿಣಿ ಪಳ್ಳಿ, ಕೊಡಮಣಿತ್ತಾಯ ದೈವದ ಮುಕಾಲ್ಡಿ ಹರೀಶ್ ಶೆಟ್ಟಿ ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.



