Home Crime ಬ್ರಹ್ಮಾವರ : ತಂದೆ-ತಾಯಿಯನ್ನು ಸುತ್ತಿಗೆಯಲ್ಲಿ ಹೊಡೆದು ಕೊಲೆಗೈದ ಪುತ್ರ….!!

ಬ್ರಹ್ಮಾವರ : ತಂದೆ-ತಾಯಿಯನ್ನು ಸುತ್ತಿಗೆಯಲ್ಲಿ ಹೊಡೆದು ಕೊಲೆಗೈದ ಪುತ್ರ….!!

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಹೆತ್ತ ತಂದೆ ತಾಯಿಯನ್ನೇ ಪುತ್ರನೊಬ್ಬ ಭೀಕರವಾಗಿ ಕೊಚ್ವಿ ಕೊಲೆಗೈದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಸಂಭವಿಸಿದೆ.

ಬ್ರಹ್ಮಾವರ ತಾಲ್ಲೂಕಿನ ಗಾಂಧಿನಗರದಲ್ಲಿ ನಿನ್ನೆ ರಾತ್ರಿ ಈ ಘೋರ ದುರ್ಘಟನೆ ಸಂಭವಿಸಿದ್ದು, ಹೆತ್ತವರನ್ನೇ ಕೊಚ್ಚಿ ಕೊಲೆಗೈದ  ಪಾಪಿ ಆರೋಪಿ ಶಾಹಿದ್ ಅಲಿ (31) ಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಕೊಲೆಯಾದ ತಂದೆ ತಾಯಿ ಮೆಹಬೂಬ್ ಹಾಗೂ ಸಂಶದ್ ಬೇಗಂ ಎಂದು ತಿಳಿದು ಬಂದಿದೆ.

ಕೊಲೆಗೆ ನಿಖರ ಕಾರಣ ಹೆಚ್ಚಿನ ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ. ಬ್ರಹ್ಮಾವರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.