Home Karavali Karnataka ಕುಂದಾಪುರ : LIC ಕಾಂಕ್ರೀಟ್ ರಸ್ತೆಯ ಚಪ್ಪಡಿ ಕುಸಿತ : ಸಂಚಾರಕ್ಕೆ ದುಸ್ತರ…!!

ಕುಂದಾಪುರ : LIC ಕಾಂಕ್ರೀಟ್ ರಸ್ತೆಯ ಚಪ್ಪಡಿ ಕುಸಿತ : ಸಂಚಾರಕ್ಕೆ ದುಸ್ತರ…!!

ಕುಂದಾಪುರ : ಪುರಸಭೆ ವ್ಯಾಪ್ತಿಯ ಹೃದಯ ಭಾಗದ LIC ಮುಖ್ಯ ರಸ್ತೆಯ ವಿಠಲ್ ವಾಡಿ ಸಂಪರ್ಕಿಸುವ ರಸ್ತೆ ಇದಾಗಿದ್ದು ಕಾಂಕ್ರೀಟ್ ರಸ್ತೆಯ ಮಧ್ಯಭಾಗದಲ್ಲಿ. ಚರಂಡಿಗೆ ಅಳವಡಿಸಿದ ಚಪ್ಪಡಿ ಸಂಪೂರ್ಣ ಕುಸಿದು ಬೀಳುವ ಸ್ಥಿತಿ ಎದುರಾಗಿದ್ದಂತೂ ಸತ್ಯ..! ಕಣ್ಣಿದ್ದು ಕುರುಡರಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು ವಿಠಲವಾಡಿ ನಿವಾಸಿಗಳು ಮತ್ತು ಸಾರ್ವಜನಿಕರು ಸೇರಿದಂತೆ ದಿನನಿತ್ಯ ವಿದ್ಯಾರ್ಥಿಗಳಿಗೆ ಹಾಗೂ ವಾಹನ ಸವಾರರಿಗೆ ಓಡಾಡಲು ದುಸ್ತರವಾಗಿ ಪರಿಣಮಿಸಿದೆ, ಈ ಬಗ್ಗೆ ಕುಂದಾಪುರ ಪುರಸಭೆಗೆ ಮಾಹಿತಿ ನೀಡಿದರು ಏನು ಪ್ರಯೋಜನವಾಗಿಲ್ಲ ಎಂದು ನಿವಾಸಿಗಳಾದ ನಾಗರಾಜ್ ಮೊಗವೀರ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.