Home Karnataka ಸಿಎಂ ಬದಲಾವಣೆ ಕಷ್ಟ, ಇಬ್ಬರು ಮಹಾ ವ್ಯಕ್ತಿಗಳ ಸಾವು : ಕೋಡಿ ಮಠ ಸ್ವಾಮಿಜಿ…!!

ಸಿಎಂ ಬದಲಾವಣೆ ಕಷ್ಟ, ಇಬ್ಬರು ಮಹಾ ವ್ಯಕ್ತಿಗಳ ಸಾವು : ಕೋಡಿ ಮಠ ಸ್ವಾಮಿಜಿ…!!

ಬೀದರ್ : ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಈ ವರ್ಷದಲ್ಲಿ ದೇಶದಲ್ಲಿ ಇಬ್ಬರು ಮಹಾ ವ್ಯಕ್ತಿಗಳ ಸಾವಿನ ಸೂಚನೆ ಕೊಟ್ಟಿದ್ದಾರೆ. ರಾಜ್ಯ ರಾಜಕೀಯದಲ್ಲಿ ಸಿಎಂ ಸ್ಥಾನ ಬದಲಾವಣೆಯ ಬಗ್ಗೆಯೂ ಕುತೂಹಲಕಾರಿ ನುಡಿ ಆಡಿದ್ದಾರೆ.

ಹೊಸ ವರ್ಷದ ಆರಂಭದಲ್ಲೇ ರಾಜ್ಯ ರಾಜಕೀಯದ ಬಗ್ಗೆ ಕೋಡಿ ಮಠದ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಬೀದರ್ನಲ್ಲಿ ಮಾತಾಡಿದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಸದ್ಯದ ರಾಜ್ಯ ರಾಜಕೀಯದ ಪರಿಸ್ಥಿತಿ ನೋಡಿದರೆ ಬದಲಾವಣೆ ಕಷ್ಟ ಎಂದಿದ್ದಾರೆ.

ಈ ಬಾರಿ ಕೂಡ ಸಿಎಂ ಸಿದ್ದರಾಮಯ್ಯ ಅವರೇ ಬಜೆಟ್ ಮಂಡಿಸ್ತಾರೆ. ರಾಜ್ಯದ ಭಂಡಾರ ಬಜೆಟ್ ಅಂತ ಕರಿತೀವಿ, ಆ ಬಜೆಟ್ ಆಗಬೇಕು. ಯುಗಾದಿವರೆಗೂ ಬದಲಾವಣೆ ಆಗೋದು ಕಷ್ಟ. ಹಾಲುಮತ ಸಮಾಜದವರ ಕೈಯಿಗೆ ಅಧಿಕಾರ ಬಂದ್ರೆ ಬಿಡಿಸಿಕೊಳ್ಳುವುದು ಕಷ್ಟ. ಯಾಕಂದ್ರೆ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಿದ ಹಕ್ಕ-ಬುಕ್ಕರು ಕೂಡ ಹಾಲುಮತದವರೇ. ಛತ್ರಪತಿ ಶಿವಾಜಿ, ಕಾಶಿಯ ವಿಶ್ವನಾಥ ದೇವರ ರಾಣಿ ಅಹಲ್ಯಾಭಾಯಿಯಂತಹ ಮಹನೀಯರು ಕೂಡ ಹಾಲುಮತಕ್ಕೆ ಸೇರಿದವರು. ಹೀಗಾಗಿ ಹಾಲುಮತ ಪ್ರಾಚೀನ ಸಮಾಜವಾಗಿದೆ. ದೈವಗೊಳ್ಳುವ ಸಮಾಜ, ಆ ಸಮಾಜದ ಮೊಟ್ಟ ಮೊದಲ ಸಿಎಂ ಸಿದ್ದರಾಮಯ್ಯ. ಹಾಲುಮತ ಸಮಾಜಕ್ಕೆ ಅಧಿಕಾರ ಸಿಕ್ಕಿದೆ, ಅವರನ್ನ ಇಳಿಸೋದು ಕಷ್ಟ ಎಂದು ಕೋಡಿಶ್ರೀ ಮತ್ತೆ ನುಡಿದಿದ್ದಾರೆ.

ಅವರು ಬಿಟ್ಟು ಕೊಡಲ್ಲ, ಇಳಿಯೋದೂ ಇಲ್ಲ
ಅವರಾಗಿಯೇ ಬಿಟ್ಟು ಕೊಟ್ರೆ ಬೇರೆಯವರು ಮುಖ್ಯಮಂತ್ರಿ ಆಗಬಹುದು. ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡಲ್ಲ, ಇಳಿಯೋದು ಇಲ್ಲ. ಯುಗಾದಿ ಕಳೆದ ಮೇಲೆ ಸಿಎಂ ಬದಲಾವಣೆ ಬಗ್ಗೆ ಹೇಳೋದಾಗಿ ಕೋಡಿಶ್ರೀಗಳು ತಿಳಿಸಿದ್ದಾರೆ. ಇದಲ್ಲದೆ, ಡಿಸಿಎಂ ಡಿಕೆ ಶಿವಕುಮಾರ್ ನಮಗೆ ಬಹಳ ಬೇಕಾದವರು, ಪರಿಚಯಸ್ಥರು. ಆದರೆ ಡಿಕೆಶಿ ಬಗ್ಗೆ ಸದ್ಯ ಹೇಳುವ ಪ್ರಸಂಗ ಇಲ್ಲ ಎಂದಿದ್ದಾರೆ.

ಅಲ್ಲದೇ ದೇಶಕ್ಕೆ ಅಪಾಯ ಇದೆ, ಸಾವು-ನೋವಾಗುವ ಲಕ್ಷಣ ಇದೆ. ಇಬ್ಬರು ಮಹಾ ವ್ಯಕ್ತಿಗಳು ಸಾವನ್ನಪ್ಪುವ ಲಕ್ಷಣಗಳು ಕಾಣ್ತಿದೆ ಎಂದು ಕೋಡಿಮಠದ ಡಾ.ಶಿವಾನಂದ ಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.