Home Crime ಅಕ್ರಮ ಕೆಂಪು ಕಲ್ಲು ಸಾಗಾಟ : ಚಾಲಕ ಅರೆಸ್ಟ್…!!

ಅಕ್ರಮ ಕೆಂಪು ಕಲ್ಲು ಸಾಗಾಟ : ಚಾಲಕ ಅರೆಸ್ಟ್…!!

ಉಡುಪಿ: ನಗರದ ಸಮೀಪ ಟಿಪ್ಪರ್ ನಲ್ಲಿ ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ ನಡೆಸುತ್ತಿರುವಾಗ ಪೊಲೀಸರು ಟಿಪ್ಪರ್ ಸಹಿತ ಚಾಲಕನನ್ನು ಬಂಧಿಸಿದ್ದಾರೆ.

ಬಂಧಿತ ಚಾಲಕ ಗೈಬೂ ಸಾಬಾ ನಬೀಸಬಾ ನದಾಪಾ ಎಂದು ತಿಳಿದು ಬಂದಿದೆ. ಟಿಪ್ಪರ್ ಮಾಲಕ ಮರಿಯಪ್ಪ ಹಾಗೂ ಮನೋಜ್ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.

ಉಡುಪಿ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ: ದಿನಾಂಕ 06/01/2026 ರಂದು 13:00 ಗಂಟೆಗೆ ಪಿರ್ಯಾದಿದಾರರಾದ ಗಂಗಪ್ಪ ಎಸ್‌(58), ಪೊಲೀಸ್‌ ಉಪನಿರೀಕ್ಷಕರು(ತನಿಖೆ-1), ಉಡುಪಿ ನಗರ ಪೊಲೀಸ್‌ ಠಾಣೆ, ಉಡುಪಿ ಇವರೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿರುವಾಗ 13:35 ಗಂಟೆಗೆ ಉಡುಪಿ ತಾಲೂಕು ಅಂಬಲಪಾಡಿ ಗ್ರಾಮದ ಕಾಳಿಕಾಂಬ ನಗರಕ್ಕೆ ಹೋಗುವ ರಸ್ತೆ ಬಳಿ ಕರಾವಳಿ ಬೈಪಾಸ್ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಅಂಬಾಲಪಾಡಿ ಕಡೆಗೆ ಬರುತ್ತಿದ್ದ KA-51-AC-7536 ನೋಂದಣಿ ಸಂಖ್ಯೆಯ ಟಿಪ್ಪರ್ ನ್ನು ನಿಲ್ಲಿಸಿ ಚಾಲಕನನ್ನು ವಿಚಾರಿಸಿದಾಗ ಆತನು ತನ್ನ ಹೆಸರು ಗೈಬೂ ಸಾಬಾ ನಬೀಸಬಾ ನದಾಪಾ ಎಂಬುದಾಗಿ ತಾನು ಕಾಪುವಿನ ಮರಿಯಪ್ಪ ಇವರ KA-51-AC-7536 ನೋಂದಣಿ ಸಂಖ್ಯೆಯ ಟಿಪ್ಪರ್ ಗೆ ಚಾಲಕನಾಗಿ ಕೆಲಸಮಾಡಿಕೊಂಡಿರುತ್ತೇನೆ ಎಂದು ಹೇಳಿರುತ್ತಾನೆ. ಟಿಪ್ಪರ್ ನ್ನು ಪರಿಶೀಲಿಸಿದಾಗ ಅದರಲ್ಲಿ 450 ಕೆಂಪು ಕಲ್ಲನ್ನು ಸಾಗಾಟ ಮಾಡುತ್ತಿರುವುದು ಕಂಡು ಬಂದಿದ್ದು, ಕೆಂಪು ಕಲ್ಲು ಸಾಗಾಟದ ಬಗ್ಗೆ ಟಿಪ್ಪರ್ ಚಾಲಕನ ಬಳಿ ವಿಚಾರಿಸಿದಾಗ ಆತನು ಟಿಪ್ಪರ್ ಮಾಲಕ ಮರಿಯಪ್ಪ ಎಂಬುವವರ ಸೂಚನೆಯಂತೆ ಕೂಲಿ ಆಳುಗಳ ಸಹಾಯದಿಂದ ಕುಂದಾಪುರ ಬಳಿಯ ಹೆಮ್ಮಾಡಿ ಬಳಿ ಮನೋಜ್ ಎಂಬುವವರ ಕೆಂಪುಕಲ್ಲನ್ನು ಟಿಪ್ಪರ್ ನಲ್ಲಿ ಲೋಡ್ ಮಾಡಿಕೊಂಡು ಬಂದಿರುವುದಾಗಿ ತಿಳಿಸಿರುತ್ತಾನೆ. ಟಿಪ್ಪರ್ ಚಾಲಕನ ಬಳಿ ಸಾಗಾಟ ಮಾಡಲು ಪರವಾನಿಗೆಯನ್ನು ಹೊಂದಿದ್ದರ ಬಗ್ಗೆ ವಿಚಾರಿಸಿದಾಗ ತಾನು ಯಾವುದೇ ಪರವಾನಿಗೆಯನ್ನು ಹೊಂದಿರುವುದಿಲ್ಲ ಎಂದು ಹೇಳಿರುತ್ತಾನೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 003/2026 ಕಲಂ: 303(2) ಜೊತಗೆ 3(5) BNS, ಕಲಂ: 4(1-A),21(4) MMRD act ರಂತೆ ಪ್ರಕರಣ ದಾಖಲಾಗಿರುತ್ತದೆ.