Home Latest ಜಯ ಕರ್ನಾಟಕ ಸಂಘಟನೆಯಿಂದ ಅಪಘಾತ ಮರಣ ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳಲು ಮನವಿ…!!

ಜಯ ಕರ್ನಾಟಕ ಸಂಘಟನೆಯಿಂದ ಅಪಘಾತ ಮರಣ ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳಲು ಮನವಿ…!!

ಉಡುಪಿ: ಜಿಲ್ಲಾಧ್ಯಕ್ಷರಾದ ಲೋವಿಸ್ ಎಂ, ಹೋರಾಟ ಸಮಿತಿ ಅಧ್ಯಕ್ಷರಾದ ಕರುಣಾಕರ್ ಎಂ ಪೂಜಾರಿ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ನಿನ್ ನೇತೃತ್ವದ ಉಡುಪಿ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ನಿಯೋಗ ಉಡುಪಿ ಜಿಲ್ಲೆಯಲ್ಲಿ ವಿಶೇಷವಾಗಿ ಉಡುಪಿ ನಗರ ಪ್ರದೇಶಗಳಲ್ಲಿ ವಾಹನಗಳಿಂದ ದಿನನಿತ್ಯ ಆಗುತ್ತಿರುವ ಅಪಘಾತ, ಅಂಗವಿಕಲತೆ, ಮರಣ ವನ್ನು ತಡೆಗೊಳಿಸಲು ಕ್ರಮ ತೆಗೆದುಕೊಳ್ಳುವಂತೆ ರಾಜ್ಯದ ಮುಖ್ಯಮಂತ್ರಿ ಸಾರಿಗೆ ಸಚಿವರಿಗೆ ಸಲ್ಲಿಸಿದ ಮನವಿ ಪ್ರತಿ ಉಡುಪಿ ಜಿಲ್ಲಾ ಅಪಾರ ಜಿಲ್ಲಾಧಿಕಾರಿಯವರಾದ ಅಭಿದ್ ಗದ್ಯಾಳ ಇವರಿಗೆ ಮಣಿಪಾಲದ ಅವರ ಕಚೇರಿಯಲ್ಲಿ, ಉಡುಪಿ ಜಿಲ್ಲಾ ಅಧಿಕ್ಷಕರಾದ ಹರಿರಾಮ್ ಶಂಕರ್ ಇವರಿಗೆ ಬನ್ನಂಜೆಯ ಅವರ ಕಚೇರಿಯಲ್ಲಿ ಸಲ್ಲಿಸಿ ಸಹಕರಿಸುವಂತೆ ಮನವಿ ಮಾಡಿತು.

ಉಡುಪಿ ಜಿಲ್ಲೆಯ ಇತ್ತೀಚಿನ ದಿನಗಳಲ್ಲಿ ಅಪಘಾತಗಳು, ಮರಣ ಸಾರಿಗೆ ವಾಹನಗಳಿಂದ, ಚತುಷ್ಟ ಚಕ್ರ ಹಾಗೂ ದ್ವಿಚಕ್ರ ವಾಹನಗಳಿಂದ ದಿನನಿತ್ಯ ಅಪಘಾತಗಳು ನಡೆಯುತ್ತಿದೆ. ವಿಶೇಷವಾಗಿ ಉಡುಪಿ ನಗರ ಪ್ರದೇಶದಲ್ಲಿನ, ಉಡುಪಿ ನ್ಯಾಯಾಲಯದ ಸಂಕೀರ್ಣದ ಲಯನ್ಸ್ ವೃತ್ತ ಬಳಿ ಹಾಗೂ ಬನ್ನಂಜೆಯ ಜಯಲಕ್ಷ್ಮಿ ವಸ್ತ್ರ ಮಳಿಗೆ ಮುಂಭಾಗದಲ್ಲಿ ರಸ್ತೆಯ ವಿಭಾಜಕ ಇದ್ದುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಈ ವಲಯದಲ್ಲಿ ಜೀವ ಹಾನಿ ಕೂಡ ಪದೇ ಪದೇ ಆಗುತ್ತಿದೆ. ಇತ್ತೀಚೆಗೆ ಲಯನ್ಸ್ ವೃತ್ತದ ಬಳಿ ಓರ್ವ ಮಹಿಳೆ ಮೃತಪಟ್ಟಿರುವ ಘಟನೆ ಕೂಡ ನಡೆದಿರುತ್ತದೆ. ಇಂತಹ ಘಟನೆಗಳು ದಿನನಿತ್ಯ ಹೆಚ್ಚುತ್ತಿದೆ ಎಂದು ತಮ್ಮ ಅವ ಗಹನೆಗೆ ತರಬೇಕಾದ ಸಂದರ್ಭ ಉಂಟಾಗಿದೆ ಎಂದು ತಿಳಿಸಲು ವಿಷಾದಿಸುತ್ತೇವೆ. ಸಾರಿಗೆ ವಾಹನಗಳ ಸಮಯದ ಪೈಪೋಟಿಂದ, ಮದ್ಯಪಾನ ವ್ಯಸನಿಚಾಲಕರಿಂದ ಸಾರಿಗೆ ನಿಯಮವನ್ನು ಪಾಲಿಸದೆ, ಜೀಬ್ರಾ ಗುರುತಿರುವಲ್ಲಿ ವೇಗವನ್ನು ಕಡಿಮೆ ಮಾಡದೆ, ಪಾದಾಚಾರಿಗಳ ದಾರಿಯ ಮೇಲೆ ವಾಹನಹಾರಿಸಿ ಇಂತಹ ಘಟನೆಗಳು ಉಂಟಾಗಲು ಮುಖ್ಯ ಕಾರಣ. ಇದರಿಂದ ಮನೆಯಿಂದ ಹೊರಬಂದ ಪಾದಾಚಾರಿಗಳು ಮನೆಗೆ ಹಿಂತಿರುಗುವ ಭರವಸೆಯೇ ಇಲ್ಲದ ತಿಥಿ ನಿರ್ಮಾಣವಾಗಿದೆ. ವೇಳ ಮೇಲಾಟದಿಂದ ಜಗಳವಾಡಿ, ಪರಸ್ಪರ ಡಿಕ್ಕಿ ಹೊಡೆದು, ಪ್ರಯಾಣಿಕರ ಸಮಯ ಹಾಳು ಮಾಡುವ, ಅಂಗವಿಕಲರನ್ನಾಗಿ ಸಾಯುವಂತೆ ಮಾಡುವ ಚಾಲಕರ ಚಾಲನ ಪರವಾನಿಗೆಯನ್ನು ಬಸ್ಸು ಸಂಚಾರದ ಪರವಾನಿಗೆಯನ್ನು ಖಾಯಂ ಆಗಿರದು ಮಾಡಲು, ಕ್ರಮ ತೆಗೆದುಕೊಳ್ಳುವುದು ಉಡುಪಿ ನಗರ ಪ್ರದೇಶದಲ್ಲಿ ಹೆಚ್ಚು ವಾಹನಗಳು ದಿಕ್ಕು ಬದಲಾಯಿಸಲು ತಿರುವು ತೆಗೆದುಕೊಳ್ಳುವ ವೃತ್ತಗಳಲ್ಲಿ ಪೊಲೀಸರ ನೇಮಕ ಮಾಡಿ ಸಂಚಾರಿ ನಿಯಮ ಪಾಲಿಸದ, ಸಂಚಾರಿ ದೀಪದ ಸೂಚನೆ ಪಾಲಿಸದವರ ಚಾಲನಾ ಪರವಾನಿಗೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲು ಕ್ರಮ ತೆಗೆದುಕೊಳ್ಳುವುದು ಹಾಗೂ ಅವಶ್ಯಕತೆ ಇರುವ ಕೆಲವು ವಲಯದಲ್ಲಿ ವೇಗ ತಡೆಯನ್ನು ಹಾಕುವುದು. ನಗರ ಪ್ರದೇಶದಲ್ಲಿ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾದು ಹೋಗುವ ಅನೇಕ ಕಡೆಗಳಲ್ಲಿಯೂ ರಸ್ತೆ ವಿಭಜಕಗಳಿವೆ. ಹೆಚ್ಚಿನ ಸಂಖ್ಯೆಯಲ್ಲಿ ಪಾದಾ ಚಾರಿ, ಎಲ್ಲಾ ರೀತಿಯ ವಾಹನಗಳಿಂದ ಉಪಯೋಗವಾಗುತ್ತಿರುವ ನಗರ ಪ್ರದೇಶದ ವಿಭಾಜಕಗಳ ಹತ್ತಿರ ಅವಗಡವಾಗುತ್ತಿರುವುದು ಸರ್ವೇಸಾಮಾನ್ಯ. ಅಂತಹ ಕಡೆ ಎಲ್ಲಾ ವರ್ಗದ ಜನ ಹಿತ ದೃಷ್ಟಿಯಿಂದ ಪೊಲೀಸರ ನಿಯೋಜನೆ ಮಾಡಬೇಕಾದ ಅಗತ್ಯವಿದೆ. ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯ ವತಿಯಿಂದ ಯಾವುದೇ ಪ್ರತಿಭಟನೆಯನ್ನು ಹಮ್ಮಿಕೊಳ್ಳಲು ಆಸ್ಪದವನ್ನು ನೀಡದೆ ಸಮಸ್ಯೆಗಳನ್ನು ಬಗೆಹರಿಸುವಂತೆ ಈ ಮೂಲಕ ದಿನನಿತ್ಯ ಆಗುತ್ತಿರುವ ಪ್ರಾಣ ಹಾನಿ, ಇನ್ನಿತರ ಅವಘಡಕ್ಕೆ ತಡೆ ಹಾಕಲು ಕ್ರಮ ತೆಗೆದುಕೊಳ್ಳುವುದರ ಮೂಲಕ ಸಹಕರಿಸುವಂತೆ ಉಡುಪಿ ಜಿಲ್ಲಾ ಜಯ ಕರ್ನಾಟಕ ಸಂಘಟನೆಯ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು. ಈ ಮನವಿಯನ್ನು ಸ್ವೀಕರಿಸಿದ ಉಡುಪಿ ಜಿಲ್ಲಾ ಅಧೀಕ್ಷಕರಾದ ಹರಿರಾಮ್ ಶಂಕರ್ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದು, ಅಗತ್ಯವಿರುವ ಎಲ್ಲಾ ರೀತಿಯ ಕ್ರಮ ಜರುಗಿಸುವುದೆಂದು ಭರವಸೆಯನ್ನು ನೀಡಿದರು.

ಈ ನಿಯೋಗದಲ್ಲಿ ಗೌರವ ಸಲಹೆಗಾರರಾದ ಬಿ ಸುಧಾಕರ್ ರಾವ್ ಬಾರ್ಕೂರು, ಸುಧಾಕರ ಡಿ ಅಮೀನ್ ಪಂಗಾಳ, ಶಂಕರ್ ಶೆಟ್ಟಿ ಹಾವಂಜಿ, ಕಾರ್ಯಾಧ್ಯಕ್ಷರಾದ ಶರತ್ ಶೆಟ್ಟಿ ಕುಂದಾಪುರ, ಪ್ರಧಾನ ಸಂಚಾಲಕರಾದ ರತ್ನಾಕರ ಮೊಗವೀರ, ಉಪಾಧ್ಯಕ್ಷರಾದ ಮಹೇಶ್ ಕೋಟ್ಯಾನ್ ಉಪ್ಪುರು, ಪ್ರತಾಪ್ ಶೆಟ್ಟಿ ಸಾಸ್ತಾನ, ವಿಜಯ ಹೆಗಡೆ ಹೆಬ್ರಿ, ಜೊತೆ ಕಾರ್ಯದರ್ಶಿ ನಾಗರಾಜ್ ಗಾಣಿಗ ಸಾಲಿಗ್ರಾಮ, ಸಂಘಟನಾ ಕಾರ್ಯದರ್ಶಿಗಳಾದ ಗಿರೀಶ್ ಕಲ್ಮಾಡಿ, ಶಶಿಕುಮಾರ್ ಶೆಟ್ಟಿ ಕಪ್ಪೆಟ್ಟು, ಧನ ಪಾಲ ಪೂಜಾರಿ, ಸಂದೀಪ್ ಶೆಟ್ಟಿ, ವಿದ್ಯಾರ್ಥಿ ಘಟಕದ ಸಾಮಿಲ್ ಮಲ್ಪೆ, ಮಾವಿಲ್ ಮಸ್ಕಿರೆನ್, ಸೃಜನ್ ಎಸ್, ಮಿತೇಜ್ ಬಂಗೇರ, ಮಾಧ್ಯಮ ವಕ್ತರರಾದ ಶ್ರೀನಿವಾಸ ಶೆಟ್ಟಿ ತೋನ್ಸೆ ಮೊದಲಾದವರು ಉಪಸ್ಥಿತರಿದ್ದರು.