Home Karavali Karnataka ಕಲ್ಮಾಡಿಯ ಮಾಜಿ‌ ನಗರಸಭೆ ಸದಸ್ಯೆ ಇಂದಿರಾ ಶೇಖರ್ ಹೃದಯಾಘಾತದಿಂದ ನಿಧನ…!!

ಕಲ್ಮಾಡಿಯ ಮಾಜಿ‌ ನಗರಸಭೆ ಸದಸ್ಯೆ ಇಂದಿರಾ ಶೇಖರ್ ಹೃದಯಾಘಾತದಿಂದ ನಿಧನ…!!

ಮಲ್ಪೆ : ಕಲ್ಮಾಡಿ ವಾರ್ಡಿನ ಮಾಜಿ ನಗರಸಭೆ ಸದಸ್ಯೆ ಶ್ರೀಮತಿ ಇಂದಿರಾ ಶೆಖರ್ ಕಲ್ಮಾಡಿ ಇವರು ಇಂದು ಹೃದಯಾಘಾತದಿಂದ ದೈವಾದೀನರಾಗಿರುತ್ತಾರೆ.

ಕಲ್ಮಾಡಿಯ ವಾರ್ಡ್ ನಲ್ಲಿ ಸತತ ಎರಡು ಬಾರಿ ಬಿಜೆಪಿ ಪಕ್ಷದಿಂದ ಜಯಭೇರಿ ಬಾರಿಸಿ ಉಡುಪಿ ನಗರಸಭೆ ಸದಸ್ಯೆಯಾಗಿದ್ದರು. ಕಲ್ಮಾಡಿಯಲ್ಲಿ ಸಮಾಜ ಸೇವೆಯ ಮೂಲಕ ಹೆಸರುವಾಸಿಯಾಗಿದ್ದರು.

ಒಬ್ಬ ಮಗ ಹಾಗೂ ಇಬ್ಬರು ಪುತ್ರಿಯರು ಮತ್ತು ಅವರ ಪತಿಯನ್ನು ಇಂದಿರಾ ಶೇಖರ್ ಅವರು ಅಗಲಿದ್ದಾರೆ.