Home Crime ಮಂಗಳೂರು: ಚಿನ್ನಾಭರಣ ತೊಳೆದು ಕೊಡುವೆನೆಂದು ‘ಚಿನ್ನ’ ಎಗರಿಸಿ ಪರಾರಿಯಾದ ಖತರ್ನಾಕ್ ಖದೀಮ…!!

ಮಂಗಳೂರು: ಚಿನ್ನಾಭರಣ ತೊಳೆದು ಕೊಡುವೆನೆಂದು ‘ಚಿನ್ನ’ ಎಗರಿಸಿ ಪರಾರಿಯಾದ ಖತರ್ನಾಕ್ ಖದೀಮ…!!

ಮಂಗಳೂರು: ಚಿನ್ನಾಭರಣ ತೊಳೆದು ಹೊಳೆಯುವಂತೆ ಮಾಡುವ ನೆಪದಲ್ಲಿ ಕಳ್ಳನೋರ್ವನು ಮಹಿಳೆಯೊಬ್ಬರ ಚಿನ್ನವನ್ನು ಎಗರಿಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಗ್ರಾಮದಲ್ಲಿ ನಡೆದಿದೆ.

ಕಾಶಿಪಟ್ನ ಶಿವಗಿರಿಯ, ಮನೆಯೊಂದಕ್ಕೆ ಬಂದ ಕಳ್ಳನೊಬ್ಬ ಚಿನ್ನ ತೊಳೆದುಕೊಡುವುದಾಗಿ ಹೇಳಿದ್ದ. ಮಹಿಳೆಯು ಚಿನ್ನದ ಸರವನ್ನು ಆತನ ಕೈಯಲ್ಲಿ ನೀಡುತ್ತಿದ್ದಂತೆ, ಕಳ್ಳ ಓಡಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಮಹಿಳೆ ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೇ ಗ್ರಾಮದ ಮತ್ತೊಂದು ಮನೆಗೆ ತೆರಳುವ ವಿಡಿಯೋವನ್ನು ಗ್ರಾಮಸ್ಥರು ವೈರಲ್ ಮಾಡಿ, ಈ ವ್ಯಕ್ತಿ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದಾರೆ.