ಉಡುಪಿ: “ಇಂದು ಕಲಾವಿದರ ತಲೆಯಲ್ಲೂ ವಿಷಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಕರಾವಳಿಯವರೇ ಆದ ನಟ ಪ್ರಕಾಶ್ ರಾಜ್ ಅವರೇ ಅರ್ಥಮಾಡಿಕೊಳ್ಳಿ. ಇಲ್ಲಿಗೆ ಬಂದು ಅಧಿಕ ಪ್ರಸಂಗ ಮಾಡಿದರೆ ಅರಬ್ಬಿ ಸಮುದ್ರದಲ್ಲಿ ಎಳೆಯಬೇಕಾದೀತು.
ನಿಮ್ಮ ಜೀವನ ಮೀನುಗಳಿಗೆ ಆಹಾರವಾಗಬಹುದು” ಎಂದು ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹಾಗೂ ಕಾಂಗ್ರೇಸ್ ವಿರುದ್ಧ ಉಡುಪಿಯ ಜಟಕಾ ಸ್ಟ್ಯಾಂಡ್ ಬಳಿ ಬಿಜೆಪಿ ವತಿಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಸರ್ಕಾರದ ನಡೆ ಹಾಗೂ ಸಿಜೆಪಿ ವಿರುದ್ಧ ಹರಿದಾಯ್ದ ಅವರು, “ಸಿಜೆಪಿಯವರು ವಿದೇಶಿ ನೆರವಿನಿಂದ ದೇಶದಲ್ಲಿ ದೊಂಬಿ, ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ” ಎಂದು ಗಂಭೀರ ಆರೋಪ ಮಾಡಿದರು.




