Home Latest ದೇಶದ ಆರ್ಥಿಕತೆಗೆ ಸ್ವದೇಶಿ ಚಿಂತನೆಯ ಕೊಡುಗೆ : ಉದಯ ಕುಮಾರ್ ಶೆಟ್ಟಿ…!!

ದೇಶದ ಆರ್ಥಿಕತೆಗೆ ಸ್ವದೇಶಿ ಚಿಂತನೆಯ ಕೊಡುಗೆ : ಉದಯ ಕುಮಾರ್ ಶೆಟ್ಟಿ…!!

ಉಡುಪಿ: ಮನೆ ಮನಗಳಲ್ಲಿ ಸ್ವದೇಶಿ ಚಿಂತನೆಯಿAದ ದೇಶದಲ್ಲಿ ಸ್ವ ಉದ್ಯೋಗ, ಉದ್ಯೋಗ ಸೃಷ್ಟಿಯು ದೇಶದ ಆರ್ಥಿಕತೆಗೆ ಕೊಡುಗೆಯಾಗಲಿದೆ ಎಂದು ಕಿದಿಯೂರು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೆ. ಉದಯ ಕುಮಾರ್ ಶೆಟ್ಟಿ ಹೇಳಿದ್ದಾರೆ.

ಅವರು ಶಕ್ತಿ ಈವೆಂಟ್ಸ್ ಸಹಯೋಗದಲ್ಲಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಅಡಿಟೋರಿಯಂ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯುವ ಸ್ವದೇಶಿ ಖಾದ್ಯ ಮೇಳ(ನಮ್ಮ ನೆಲದ ರುಚಿ-ನಮ್ಮವರ ಉತ್ಪನ್ನ) ಉದ್ಘಾಟನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.ಜನ, ಸಮಾಜದ ಆರೋಗ್ಯಕ್ಕೆ ಪೂರಕವಾದ ಸ್ವದೇಶಿ ಉತ್ತಮ ಉತ್ಪನ್ನಗಳನ್ನು ನೀಡಬೇಕು. ಸ್ವದೇಶಿ ವಸ್ತು ಖರೀದಿಗೆ ಎಲ್ಲರೂ ಸಂಕಲ್ಪ ಕೈಗೊಳ್ಳಬೇಕು ಎಂದು ಹೇಳಿದರು.

ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಮಾತನಾಡಿ, ಗುಡಿ ಕೈಗಾರಿಕೆ, ಸಾಂಪ್ರದಾಯಿಕ ಬೆಳವಣಿಗೆಯ ಅರಿವು ಇಂತಹ ಮೇಳಗಳಿಂದ ಪಡೆಯಲು ಸಾಧ್ಯ. ಸ್ಥಳೀಯರ ಪ್ರತಿಭೆ, ಕೌಶಲ್ಯ ಒರೆಗೆ ಹಚ್ಚಬೇಕು. ಗ್ರಾಹಕರ ಪ್ರೋತ್ಸಾಹ ಜಿಲ್ಲೆಯ ಆರ್ಥಿಕತೆಗೆ ಪೂರಕವಾಗಲಿದೆ ಎಂದರು.

ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಉದ್ಯಮಿ ಸುಭಾಷ್ ಸಾಲ್ಯಾನ್, ಸ್ವದೇಶಿ ಖಾದ್ಯ ಮೇಳ ಸಂಘಟಕ ಕೆ. ಕೃಷ್ಣಮೂರ್ತಿ ಆಚಾರ್ಯ ಮಾತನಾಡಿದರು.

ಉಡುಪಿ ಜಿಲ್ಲಾ ಕೃಷಿಕ ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್, ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು, ಅಮೃತಾ ಕೃಷ್ಣಮೂರ್ತಿ, ಸಹಕಾರಿ ಧುರೀಣ ವೈ. ಸುರ್ ಕುಮಾರ್, ಚರಣ್‌ರಾಜ್ ಬಂಗೇರ, ಶಕ್ತಿ ಈವೆಂಟ್ಸ್ ಸಂಸ್ಥೆಯ ಗುರುಪ್ರಸಾದ್, ಸಂತೋಷ್, ಯೋಗೀಶ್ ಉಪಸ್ಥಿತರಿದ್ದರು.

೦೧ಎಸ್‌ಆರ್‌ಬಿ ಶಕ್ತಿ: ಸ್ವದೇಶಿ ಖಾದ್ಯ ಮೇಳವನ್ನು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಶನಿವಾರ ಉದ್ಘಾಟಿಸಿದರು.