ಮಂಗಳೂರು: ತಲ್ವಾರ್ ಹಿಡಿದು ರೀಲ್ಸ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದಡಿಯಲ್ಲಿ ಕಾವೂರ್ ಪೊಲೀಸರು ಭಾರತೀಯ ನ್ಯಾಯ ಸಂಹಿತಾ, 2023, ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಹಾಗು ಐಟಿ ಕಾಯ್ದೆಯ ಅಡಿಯಲ್ಲಿ ಕ್ರೈಂ ನಂಬ್ರ 188/2025 ರಂತೆ ಪ್ರಕರಣ ದಾಖಲಿಸಿ ಇಬ್ಬರು ಯುವಕರನ್ನು ಬಂಧಿಸಿದ್ದರು.
ಬಂಧಿತರನ್ನು ನಗರದ ಬಂದರು ಜೆ ಎಂ ರಸ್ತೆ ನಿವಾಸಿ ಅಮೀರ್ ಸುಹೈಲ್ (28) ಮತ್ತು ಕಾವೂರ್ ಪಂಜಿಮೊಗರು ಉರುಂಡಾಡಿ ಗುಡ್ಡೆ ನಿವಾಸಿ ಸುರೇಶ್ (29) ಎಂದು ಗುರುತಿಸಲಾಗಿದೆ.
ರೀಲ್ಸ್ ಚಿತ್ರೀಕರಣಕ್ಕೆ ಬಳಸಿದ ತಲ್ವಾರ್ ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಲು ಬಳಸಿದ್ದ ಮೊಬೈಲ್ ಫೋನ್ ಅನ್ನು ಕಾವೂರ್ ಪೊಲೀಸರು ವಶಪಡಿಸಿದ್ದಾರೆ.
ಆರೋಪಿಗಳನ್ನು ಬಂಧಿಸಿ ಮಂಗಳೂರಿನ ಮಾನ್ಯ ಜೆ ಎಂ ಎಫ್ ಸಿ 3ನೇ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು, ಇದೀಗ ಬಂಧಿತ ಆರೋಪಿಗಲಾದ ಅಮೀರ್ ಸುಹೈಲ್ ಹಾಗು ಸುರೇಶ್ ಗೆ ಮಂಗಳೂರಿನ ಮಾನ್ಯ ಜೆ ಎಂ ಎಫ್ ಸಿ 3ನೇ ನ್ಯಾಯಾಲಯವು ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆರೋಪಿಗಳ ಪರವಾಗಿ ಯುವ ವಕೀಲರಾದ ಸಿನಾನ್ ಸಿದ್ದಿಕ್ ಹಾಗು ಅನ್ನು ಮಲಿಕ್ ರವರು ವಾದ ಮಂಡಿಸಿದ್ದರು.



