ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮವಾರ ಸಮೀಪ ವ್ಯಕ್ತಿಯೊಬ್ಬರು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಕುಶಲ್ ಶೆಟ್ಟಿ ಎಂದು ತಿಳಿದು ಬಂದಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಫಿರ್ಯಾದಿ ಅತುಲ್ ಕೆ ಶೆಟ್ಟಿ (32) ಚೇರ್ಕಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ತಂದೆ ಕುಶಲ್ ಶೆಟ್ಟಿ ಶೆಟ್ಟಿ ಪ್ರಾಯ: 67 ವರ್ಷ ರವರು ಅವರು ದಿನಾಂಕ: 13/12/2025 ರಂದು ಸಂಜೆ 05:00 ಗಂಟೆಗೆ ಪಿರ್ಯಾದಿದಾರರು ವಾಸವಿರುವ ಹೇರೂರು ಗ್ರಾಮದ ಅಕ್ಷರ ಮನೆಯಿಂದ ಹಳೆ ಮನೆಯಾದ ಚೇರ್ಕಾಡಿಗೆ ಮನೆಗೆ ಹೋಗಿದ್ದು, ದಿನಾಲೂ ವಾಪಸ್ಸು ಬರುತ್ತಿದ್ದು, ದಿನಾಂಕ: 14/12/2025 ರಂದು 09:00 ಗಂಟೆಯಾದರೂ ಕೂಡಾ ಮನೆಗೆ ಬಾರದ ಕಾರಣ ಪೋನ್ ಮಾಡಿದ್ದರೂ ಸ್ವೀಕರಿಸಿದೇ ಇದ್ದು, ಪಿರ್ಯಾದಿದಾರರ ತಂದೆಯವರು ಮನೆಯ ಉಪ್ಪರಿಗೆಯಲ್ಲಿ ದಿನಾಂಕ: 13/12/2025 ರಂದು ಸಂಜೆ 17:00 ಗಂಟೆಯಿಂದ ದಿನಾಂಕ: 14/12/2025 ರಂದು ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯು.ಡಿ.ಆರ್ 88/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.



