Home Crime ಮಟ್ಕಾ ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ : ಆರೋಪಿಯ ಬಂಧನ…!!

ಮಟ್ಕಾ ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ : ಆರೋಪಿಯ ಬಂಧನ…!!

ಹೆಬ್ರಿ : ನಾಲ್ಕೂರು ಗ್ರಾಮದ ಚಾಕ್ಟಿಕಟ್ಟೆ ಪೇಟೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಖಚಿತ ಮಾಹಿತಿ ಮೇರೆಗೆ ಹೆಬ್ರಿ ಪೊಲೀಸ್‌ ಠಾಣಾ ಪೊಲೀಸ್‌ ಉಪನಿರೀಕ್ಷಕ (ತನಿಖೆ) ಚಂದ್ರ ಎ. ಕೆ. ಅವರು ದಾಳಿ ಮಾಡಿದ್ದಾರೆ.

ಈ ವೇಳೆ ವಿಚಾರಿಸಿದಾಗ ಬ್ರಹ್ಮಾವರ ಕುದಿ ಗ್ರಾಮದ ಶಂಕರ ನಾಯ್ಕ ಎಂಬವರು ಮಟ್ಕಾ ಜುಗಾರಿ ಆಡುತ್ತಿರುವುದು ತಿಳಿದು ಬಂದಿದೆ.

ಆತನಿಂದ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ 1100 ರೂ. ನಗದು, ಆಟಕ್ಕೆ ಬಳಸಿದ ಸಾಮಾಗ್ರಿಯನ್ನು ಸ್ವಾಧಿನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.