Home Karavali Karnataka ಪಡುಬಿದ್ರೆ : ಉಚಿತ ವೋಟರ್ ಐಡಿ ಕಾರ್ಡ್ ಅಭಿಯಾನ ಹಾಗೂ ವೋಟರ್ ಐಡಿ ಕಾರ್ಡ್ ತಿದ್ದುಪಡಿ...

ಪಡುಬಿದ್ರೆ : ಉಚಿತ ವೋಟರ್ ಐಡಿ ಕಾರ್ಡ್ ಅಭಿಯಾನ ಹಾಗೂ ವೋಟರ್ ಐಡಿ ಕಾರ್ಡ್ ತಿದ್ದುಪಡಿ ಕಾರ್ಯಕ್ರಮ…!!

ಪಡುಬಿದ್ರೆ : ಯೂತ್ ಎಂಪವರ್ಮೆಂಟ್ ಫೆಡರೇಷನ್ ಕಂಚಿನಡ್ಕ ಪಡುಬಿದ್ರಿ ವತಿಯಿಂದ ಉಚಿತ ವೋಟರ್ ಐಡಿ ಕಾರ್ಡ್ ಅಭಿಯಾನ ಹಾಗೂ ವೋಟರ್ ಐಡಿ ಕಾರ್ಡ್ ತಿದ್ದುಪಡಿ ಕಾರ್ಯಕ್ರಮ ಕಂಚಿನಡ್ಕದ ಮುಸ್ಲಿಂ ವೆಲ್ಫೇರ್ ಅಸೋಸಿಯೇಷನ್ ಕಚೇರಿಯಲ್ಲಿ ಊರಿನ ಹಿರಿಯರ ಸಹಾಯ ಸಹಕಾರದಿಂದ ಬಹಳ ಯಶಸ್ವಿಯಾಗಿ ನಡೆಯಿತು.

ಸ್ಥಳೀಯ ನಾಗರಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಉಚಿತ ವೋಟರ್ ಐಡಿ ಕಾರ್ಡ್ ಅಭಿಯಾನ ಹಾಗೂ ವೋಟರ್ ಐಡಿ ಕಾರ್ಡ್ ತಿದ್ದುಪಡಿ ಕಾರ್ಯಕ್ರಮ ಮಾಡಲಾಯಿತು.

ಅರಫ ಬಾಯ್ಸ್ ಸ್ಪೋರ್ಟ್ಸ್ ಹಾಗೂ ಕಲ್ಚರಲ್ ಕ್ಲಬ್ ಕಂಚಿನಡ್ಕ ಇದರ ಅಧ್ಯಕ್ಷರಾದ ಎಂ. ಎಸ್ ಸಯ್ಯದ್ ನಿಜಾಮ್ ಮಾತನಾಡಿ, ಕಾರ್ಯಕ್ರವನ್ನು ಉದ್ದೇಶಿಸಿ ಮಾತನಾಡಿ ಯೂತ್ ಎಂಪವರ್ಮೆಂಟ್ ಫೆಡರೇಷನ್ ಕಂಚಿನಡ್ಕ ವತಿಯಿಂದ ಆಯೋಜಿಸಿರುವ ಈ ಒಂದು ಕಾರ್ಯಕ್ರಮದಿಂದ ಈ ಭಾಗದ ಜನರಿಗೆ ಅನುಕೂಲವಾಗಿದೆ. ಸಾರ್ವಜನಿಕರಿಂದಲೂ ಉತ್ತಮ ಸ್ಪಂದನೆ ದೊರೆತಿದೆ. ಸಂಸ್ಥೆಯ ವತಿಯಿಂದ ಇಂತಹ ಉತ್ತಮ ಕಾರ್ಯಕ್ರಮಗಳು ಮುಂದೆಯೂ ನಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಫಿರೋಜ್ ಕಂಚಿನಡ್ಕ, ಎಂ.ಎಸ್. ಶಾಫಿ, ಹಸನ್ ಭಾವ, ಅಬ್ದುಲ್ ಅಝೀಝ್, ಅಬ್ದುಲ್ ರಜಾಕ್, ನಝೀರ್, ಅಜೀಜ್, ಇಬ್ರಾಹಿಂ, ಹೈದರ್, ಪಿ.ಎಂ ತೌಸಿರ್, ಸೈಫ್, ಜಸರ್, ಹಾಗೂ ಯೂತ್ ಎಂಪವರ್ಮೆಂಟ್ ಫೆಡರೇಷನ್ ಇದರ ಸದಸ್ಯರುಗಳಾದ ತೌಶೀನ್, ಫರಾಝ್, ರಿಫಾನ್, ಬಿಲಾಲ್, ಆಶೀರ್ ಹಾಗೂ ಊರಿನ ಹಿರಿಯರು ಉಪಸ್ಥಿತರಿದ್ದರು.