ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ಗಂಡ ಹೆಂಡತಿ ನಡುವೆ ನಡೆದ ಜಗಳದಲ್ಲಿ ಹೆಂಡತಿಗೆ ಕೋಲಿನಿಂದ ಹೊಡೆದು ನಂತರ ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರು ನಿಟ್ಟೆ ನಿವಾಸಿ ಶಕುಂತಲ ಶೆಟ್ಟಿಯವರ ಗಂಡ ಎಂದು ತಿಳಿದು ಬಂದಿದೆ.
ಈ ಘಟನೆ ಬಗ್ಗೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಫಿರ್ಯಾದಿ ಶ್ರೀ ಸಾಯಿಕಿರಣ್ ಶೆಟ್ಟಿ, (29) ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 01/12/2025 ರಂದು ಕಾರ್ಕಳದಲ್ಲಿ ಸ್ನೇಹಿತನ ಮದುವೆ ಕಾರ್ಯಕ್ರಮದಲ್ಲಿ ಇದ್ದಾಗ ಬೆಳಿಗ್ಗೆ 11:30 ಗಂಟೆಗೆ ಪೋಸ್ಟ್ ಮ್ಯಾನ್ ಅನೂಪ್ ರವರು ಫೋನ್ ಮಾಡಿ, ಪೋಸ್ಟ್ ಕೊಡಲು ಮನೆಗೆ ಹೋದಾಗ ತಾಯಿಯವರು ಗಾಯಗೊಂಡಿದ್ದು, ಕೂಡಲೇ ಮನೆಗೆ ಬರುವಂತೆ ತಿಳಿಸಿದಂತೆ ಮಧ್ಯಾಹ್ನ 12:00 ಗಂಟೆಗೆ ಮನೆಗೆ ಹೋದಾಗ ತಾಯಿ ಶಕುಂತಳ ಶೆಟ್ಟಿಯವರು ಗಾಯಗೊಂಡು ತಲೆಯಿಂದ ರಕ್ತ ಬರುತಿತ್ತು ವಿಚಾರಿಸಿದಾಗ, ತಂದೆ ಬೆಳಗ್ಗೆ 10:00 ಗಂಟೆಗೆ ಕೋಲಿನಿಂದ ಹೊಡೆದ ಬಗ್ಗೆ ತಿಳಿಸಿದರು. ಫಿರ್ಯಾದುದಾರರು ಮನೆಯೊಳಗೆ ಹೋಗಿ ನೋಡಿದಾಗ ತಂದೆ ಮಲಗುವ ಕೋಣೆಯ ಬಾಗಿಲು ಹಾಕಿದ್ದು, ಬಾಗಿಲು ತಟ್ಟಿದರೂ, ಅವರು ಬಾಗಿಲು ತೆರೆಯದೇ ಇದ್ದ ಕಾರಣ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿದ್ದ ಸಮಯ ತಂದೆ ಮನೆಯಲ್ಲಿ ಅವರು ಮಲಗುವ ಕೋಣೆಯೊಳಗೆ ಫ್ಯಾನಿಗೆ ಲುಂಗಿಯನ್ನು ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ವಿಚಾರ ತಿಳಿದುಬಂದಿದ್ದು, ತಂದೆ ಮತ್ತು ತಾಯಿಯವರ ಮಧ್ಯೆ ಯಾವುದೋ ಕಾರಣಕ್ಕಾಗಿ ಜಗಳ ಆಗಿದ್ದು ತಂದೆ , ತಾಯಿಗೆ ಮರದ ಕೋಲಿನಿಂದ ಹೊಡೆದು ಗಾಯಗೊಳಿಸಿದ್ದು, ನಂತರ ತಂದೆಯವರು ಹೆದರಿ ಅವರು ಮಲಗುವ ಕೋಣೆಯಯಲ್ಲಿ ಬೆಳಗ್ಗೆ 10:00 ಗಂಟೆಯ ಬಳಿಕ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್ 59/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.



