Home Crime ಗಂಗೊಳ್ಳಿ : ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕೆರೆಯ ನೀರಿಗೆ ಕಾಲು ಜಾರಿ ಬಿದ್ದು ಸಾವು…!!

ಗಂಗೊಳ್ಳಿ : ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಕೆರೆಯ ನೀರಿಗೆ ಕಾಲು ಜಾರಿ ಬಿದ್ದು ಸಾವು…!!

ಗಂಗೊಳ್ಳಿ: ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮೀಪ ವ್ಯಕ್ತಿಯೋರ್ವರು ಕೆರೆಯ ಪಕ್ಕದಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಸಾವನ್ನಪ್ಪಿದವರು ಆಲೂರು ಗ್ರಾಮದ ನಿವಾಸಿ ಸಂತೋಷ್ ಎಂದು ತಿಳಿದು ಬಂದಿದೆ.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ:  ಪಿರ್ಯಾದಿದಾರರಾದ ರಾಜು ಕುಲಾಲ್ (52),ಆಲೂರು ಗ್ರಾಮ ಕುಂದಾಪುರ ಇವರ ತಮ್ಮ ಸಂತೋಷ (48) ಇವರು ದಿನಾಂಕ 26/11/2025 ರಂದು ಮಧ್ಯಾಹ್ನ 01:30 ಗಂಟೆಗೆ ಆಲೂರು ಗ್ರಾಮದಲ್ಲಿರುವ ಶ್ರೀ ರಾಮ ಭಜನಾ ಮಂದಿರದಲ್ಲಿ ಅಯ್ಯಪ್ಪ ಸ್ವಾಮಿಯ ಮಾಲಾಧಿಕಾರಿಗಳ ಅನ್ನಸಂತರ್ಪಣೆ ಮಾಡಿ ಆಲೂರು ಗ್ರಾಮದ ದೊಳಬೆಯಲ್ಲಿರುವ ಅಶೋಕ ಶೆಟ್ಟಿಯವರ ಜಾಗದಲ್ಲಿ ನಡೆದುಕೊಂಡು ಹೋಗುವಾಗ ಮಧ್ಯಾಹ್ನ 02:00 ಗಂಟೆಯಿಂದ 03:00 ಗಂಟೆಯ ಮಧ್ಯಾವದಿಯಲ್ಲಿ ಸಂತೋಷ ರವರು ಜಾಗದಲ್ಲಿರುವ ಆವರಣ  ಇಲ್ಲದ ಕೆರೆಗೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಉಸಿರು ಗಟ್ಟಿ ಮೃತಪಟ್ಟಿರುತ್ತಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.