ಬೆಂಗಳೂರು : ಈ ವಾರ ಕೂಡ ಬರೋಬ್ಬರಿ 8 ಸಿನಿಮಾಗಳು ರಿಲೀಸ್ ಆಗಿದೆ. ಅದರಲ್ಲಿ ಲಿಖಿತ್ ಶೆಟ್ಟಿ, ಖುಷಿ ರವಿ ಹಾಗೂ ತೇಜಸ್ವಿನಿ ಶರ್ಮಾ, ರಂಗಾಯಣ ರಘು ನಟನೆಯ ‘ಫುಲ್ ಮೀಲ್ಸ್’ ಸಿನಿಮಾ ಕೂಡ ಒಂದು. ಈ ಸಿನಿಮಾ ನಿನ್ನೆ (ನವೆಂಬರ್ 21)ರಂದು ರಾಜ್ಯಾದ್ಯಂತ ರಿಲೀಸ್ ಆಗಿದೆ.
ಪ್ರೇಕ್ಷಕರು ಚಿತ್ರ ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಲಿಖಿತ್ ಶೆಟ್ಟಿ ಅವರ ಅಭಿನಯವನ್ನು ಜನರು ಮೆಚ್ಚಿದ್ದಾರೆ. ರೊಮ್ಯಾಂಟಿಕ್, ಕಾಮಿಡಿ ಜಾನರ್ ಸಿನಿಮಾ ‘ಫುಲ್ ಮೀಲ್ಸ್’ ಈಗಾಗಲೇ ಪ್ರೀಮಿಯರ್ ಶೋ ಆಗಿದೆ. ಈ ಸಿನಿಮಾದಲ್ಲಿ ಲಿಖಿತ್ ಶೆಟ್ಟಿ ಒಬ್ಬ ಫೋಟೊಗ್ರಾಫರ್ ಆಗಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಖುಷಿ ರವಿ, ತೇಜಸ್ವಿನಿ ಶರ್ಮಾ ನಾಯಕಿಯರಾಗಿ ನಟಿಸುತ್ತಿದ್ದಾರೆ. ಲಿಖಿತ್ ಶೆಟ್ಟಿಯ ಮಾವನಾಗಿ ಹಿರಿಯ ನಟ ರಂಗಾಯಣ ರಘು ನಟಿಸಿದ್ದಾರೆ
ವಿನಾಯಕ ನಿರ್ದೇಶಿಸಿರುವ ಈ ಸಿನಿಮಾ ಹಲವು ವರ್ಷಗಳಿಂದ ದೊಡ್ಡ ಯಶಸ್ಸನ್ನು ಎದುರು ನೋಡುತ್ತಿರುವ ಲಿಖಿತ್ ಶೆಟ್ಟಿ ‘ಫುಲ್ ಮೀಲ್ಸ್’ ಜನರಿಗೆ ಇಷ್ಟವಾಗಿದೆ.
ಚಿತ್ರದದ ಕಥೆ : ಲಿಖಿತ್ ಶೆಟ್ಟಿ ಒಬ್ಬ ಮಿಡಲ್ ಕ್ಲಾಸ್ ಫೋಟೋಗ್ರಾಫರ್. ಅವರ ಮಾವನೇ ರಂಗಾಯಣ ರಘು. ಮಾವನಿಗೆ ತನ್ನ ಮಗಳನ್ನು ಲಿಖಿತ್ ಶೆಟ್ಟಿಗೆ ಕೊಡಬೇಕು ಎನ್ನುವ ಆಸೆಯಿರುತ್ತೆ. ಆದರೆ, ಆ ಹುಡುಗಿ ಬೇರೆಯವರನ್ನು ಇಷ್ಟ ಪಟ್ಟು ಮದುವೆ ಆಗುತ್ತಾರೆ. ಲಿಖಿತ್ ಚಿಕ್ಕಂದಿನಿಂದ ಅವರ ಮನೆಯಲ್ಲಿಯೇ ಬೆಳೆದಿದ್ದರಿಂದ ಸಾಲ ಮಾಡಿ ರಂಗಾಯಣ ರಘು ಫೋಟೊ ಸ್ಟುಡಿಯೋ ಹಾಕಿಕೊಡುತ್ತಾರೆ. ಆದರೆ ಅದರಲ್ಲಿ ವ್ಯಾಪಾರ ಆಗುತ್ತಿರಲ್ಲ. ಚಿಕ್ಕ ಪುಟ್ಟ ಹಣ ತೆಗೆದುಕೊಂಡು ಫೋಟೋಗ್ರಾಫಿ ಮಾಡುತ್ತಿರುತ್ತಾರೆ. ಈ ವೇಳೆ ಇನ್ನೊಬ್ಬ ಹೀರೋಯಿನ್ ತೇಜಸ್ವಿನಿ, ಮೇಕಪ್ ಆರ್ಟಿಸ್ಟ್ ಆಗಿರುತ್ತಾರೆ. ಇವರಿಬ್ಬರೂ ಸೇರಿ ಕಾಂಬಿನೇಷನ್‌ನಲ್ಲಿ ಕೆಲಸ ಮಾಡುತ್ತಾರೆ. ಈ ವೇಳೆ ತೇಜಸ್ವಿನಿಗೆ ಲಿಖಿತ್ ಶೆಟ್ಟಿ ಮೇಲೆ ಲವ್ ಆಗಿರುತ್ತೆ. ಹಾಗಂತ ಇದು ಟು ವೇ ಲವ್ ಅಲ್ಲ. ಇದೇ ವೇಳೆ ಹೀರೋಯಿನ್ ಖುಷಿ ರವಿ ಮದುವೆ ಫಿಕ್ಸ್ ಆಗಿರುತ್ತೆ. ನಾಯಕಿ ಅಣ್ಣ ರಾಜೇಶ್ ನಟರಂಗ ಹಾಗೂ ರಂಗಾಯಣ ರಘು ಪರಿಚಯವಿದ್ದಿದ್ದರಿಂದ ಫೋಟೊಗ್ರಾಫರ್ ಬೇಕು ಎಂದಾಗ, ರಂಗಾಯಣ ರಘು ಲಿಖಿತ್ ಶೆಟ್ಟಿಯನ್ನು ಕಳುಹಿಸಿ ಕೊಡುತ್ತಾರೆ. ತೇಜಸ್ವಿನಿಗೂ ಖುಷಿ ರವಿ ಪರಿಚಯವಿರುತ್ತೆ. ಹೀಗಾಗಿ ಮೂವರು ಒಟ್ಟಿಗೆ ಸೇರುತ್ತಾರೆ. ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡುವ ವೇಳೆ ಲಿಖಿತ್ ಶೆಟ್ಟಿಗೂ ನಾಯಕ ಖುಷಿ ರವಿಗೂ ಲವ್ ಆಗುತ್ತೆ. ಅದನ್ನು ಒಂದು ದಿನ ಹೇಳಿದಾಗ, ಲಿಖಿತ್ ಶೆಟ್ಟಿ ಆಕೆಯಿಂದ ದೂರು ಸರಿಯುತ್ತಾರೆ. ಈ ಗ್ಯಾಪ್‌ನಲ್ಲಿ ನಡೆದ ಒಂದು ಫೈಟ್ ಲಿಖಿತ್ ಶೆಟ್ಟಿ ಹಾಗೂ ಖುಷಿ ರವಿಯನ್ನು ಒಂದು ಮಾಡುತ್ತೆ. ಹಾಗಂತ ಇದು ಕೇವಲ ಇಂಟರ್‌ವಲ್ ಅಷ್ಟೇ. ಮುಂದೆ ಏನಾಗುತ್ತೆ ಅನ್ನೋದನ ನೀವು ಚಿತ್ರ ನೋಡಿ…
ಪುಲ್ ಮೀಲ್ಸ್’ ಸಿನಿಾದ ಲೋಕೇಶ್, ಕ್ಯಾಮರಾ ವರ್ಕ್ ಚೆನ್ನಾಗಿದೆ. ಇನ್ನು ಲಿಖಿತ್ ಶೆಟ್ಟಿ, ಖುಷಿ ರವಿ ಹಾಗೂ ತೇಜಸ್ವಿನಿ ಪಾತ್ರಗಳು ಇಷ್ಟ ಆಗುತ್ತವೆ. ಹಾಗೇ ರಂಗಾಯಣ ರಘು, ವಿಜಯ್ ಚೆಂಡೂರು ಅವರ ಪಂಚಿಂಗ್ ಡೈಲಾಗ್ ಪ್ರೇಕ್ಷಕರಿಗೆ ಮಧ್ಯದಲ್ಲಿ ರಿಲೀಫ್ ಸಿಗುತ್ತವೆ.





