ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ನೇಪಾಳ ಮೂಲದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕ ನೇಪಾಳ ಮೂಲದ ಸೂರಜ್ ಬಾಹುಲ್ ಎಂದು ತಿಳಿಯಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರದ ವಿವರ : ಪಿರ್ಯಾದಿದಾರ ಸುಭಾಶ್ ಶೆಟ್ಟಿ (36), ತಂದೆ: ಪ್ರಭಾಕರ ಶೆಟ್ಟಿ, ವಾಸ: ಬೇಳೂರು ಕೋಣ ಬಗೆ, ಇವರು ಕೆಲಸ ಮಾಡಿಕೊಂಡಿರುವ ಬ್ರಹ್ಮಾವರದ ಧರ್ಮಾವರಂ ಕ್ಲಾಸಿಕ್ ಗಾರ್ಡನ್ ಬಾರ್ & ರೆಸ್ಟೋರೆಂಟ್ ನಲ್ಲಿ ಕಳೆದ 5 ವರ್ಷಗಳಿಂದ ಅಡುಗೆ ಕೆಲಸ ಮಾಡಿಕೊಂಡಿರುವ ನೇಪಾಳ ಮೂಲದ ಸೂರಜ್ ಬಾಹುಲ್, ಪ್ರಾಯ: 28 ವರ್ಷ ಎಂಬವರು ಯಾವುದೋ ವಯಕ್ತಿಕ ಕಾರಣದಿಂದ ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ 13.11.2025 ರಂದು ರಾತ್ರಿ 12:00 ಗಂಟೆಯಿಂದ ದಿನಾಂಕ 14.11.2025 ರಂದು ಬೆಳಿಗ್ಗೆ 06:00 ಗಂಟೆಯ ಮದ್ಯಾವಧಿಯಲ್ಲಿ ಬ್ರಹ್ಮಾವರ ಠಾಣಾ ಸರಹದ್ದಿನ, ವಾರಂಬಳ್ಳಿ ಗ್ರಾಮದ ಉಪ್ಪಿನಕೋಟೆ, PVR ಬಿರಿಯಾನಿ ಪಾಯಿಂಟ್ ಎದುರು ರಸ್ತೆ ಬದಿಯಲ್ಲಿರುವ ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಬ್ರಹ್ಮಾವರ ಠಾಣೆ ಯುಡಿಆರ್ ಕ್ರಮಾಂಕ: 80/2025 ಕಲಂ:194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.



