ಗಂಗೊಳ್ಳಿ: ಉಡುಪಿ ಜಿಲ್ಲೆಯ ಗಂಗೊಳ್ಳಿ ಸಮೀಪ ಪಾದಚಾರಿಯೊಬ್ಬರಿಗೆ ಬೈಕೊಂದು ಢಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ ರಾಜು ಮೊಗವೀರ ಎಂದು ತಿಳಿಯಲಾಗಿದೆ.
ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ : ಪಿರ್ಯಾದಿದಾರರಾದ ಪ್ರಶಾಂತ್ ಪೂಜಾರಿ (29), ಮಣೂರು ಗ್ರಾಮ ಕೋಟ ಇವರು ದಿನಾಂಕ 11/11/2025 ರಂದು ಮರವಂತೆ ಗ್ರಾಮದ ನಿರೋಣಿ ಐಸ್ ಪ್ಲಾಂಟ್ ಎದುರು ತನ್ನ ಹೆಂಡತಿಗಾಗಿ ಕಾಯುತ್ತಿರುವಾಗ ಸಂಜೆ 06:30 ಗಂಟೆಗೆ ಪಿರ್ಯಾದಿದಾರರ ಹೆಂಡತಿಯ ಮನೆಯ ಪಕ್ಕದ ನಿವಾಸಿಯಾದ ರಾಜು ಮೊಗವೀರ (46) ಎಂಬುವವರು ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯ ರಸ್ತೆಯಲ್ಲಿ ಕುಂದಾಪುರ ಬೈಂದೂರು ಕಡೆಗೆ ತಮ್ಮ ಮನೆಗೆ ನಡೆದುಕೊಂಡು ಹೋಗಲು ರಸ್ತೆಯ ಅಂಚಿನಲ್ಲಿ ಬರುತ್ತಾ ಅವರ ಎದುರುಗಡೆ ಬೈಂದೂರು ಕುಂದಾಪುರ ಕಡೆಗೆ KA-20-EF-7754 ನೇ ಮೋಟಾರ್ ಸೈಕಲ್ ಸವಾರ ಅಕ್ಷಯ್ ಅತಿವೇಗ ಹಾಗೂ ಅಜಾಗುರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜು ಮೊಗವೀರರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಅದರ ಪರಿಣಾಮ ಮುಖಕ್ಕೆ ಹೊಡೆದ ರಕ್ತಗಾಯವಾಗಿದ್ದು ಮಾತನಾಡುತ್ತಿರಲಿಲ್ಲ ನಂತರ ಒಂದು ಆಂಬುಲೆನ್ಸ ನಲ್ಲಿ ತೆಗೆದುಕೊಂಡು ಹೋಗಿದ್ದು ನಂತರ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಸಂಜೆ 7:15 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿದುಬಂತು ಮೋಟಾರ್ ಸೈಕಲ್ ಸವಾರನಿಗೆ ರಕ್ತಗಾಯವಾಗಿದ್ದು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2025 ಕಲಂ: 281, 106 BNS ರಂತೆ ಪ್ರಕರಣ ದಾಖಲಾಗಿರುತ್ತದೆ.



