ಹಿರಿಯಡ್ಕ: ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ವ್ಯಕ್ತಿಯೊಬ್ಬರು ಹೊಳೆಗೆ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿ ಪೆರ್ಡೂರು ನಿವಾಸಿ ಶ್ರೀಶಾನ್ ಶೆಟ್ಟಿ ಎಂದು ತಿಳಿದು ಬಂದಿದೆ.
ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಸಾರಶ : ಪಿರ್ಯಾದಿದಾರರಾದ ಕರುಣಾಕರ ಶೆಟ್ಟಿ (50) ತಂದೆ: ಸಂಜೀವ ಶೆಟ್ಟಿ ವಾಸ: ಆನಂತ ಪದ್ಮನಾಭ ನಿಲಯ , ಕುಕ್ಕೂಂಜಾರು ಪೆರ್ಡೂರು ಇವರ ಮಗ ಶ್ರೀಶಾನ್ ಕೆ ಶೆಟ್ಟಿ (15) ರವರು ದಿನಾಂಕ 09/10/2025 ರಂದು ಪಿರ್ಯಾದುದಾರರ ಜೊತೆ ಪೆರ್ಡೂರಿಗೆ ಬಂದಿದ್ದು ನಂತರ ಅಲಂಗಾರಿನ ಅಜ್ಜಿ ಮನೆಗೆ ಪಿರ್ಯಾದುದಾರರ KA-20 HD-4227 ನೇ ಸ್ಕೂಟರ್ನಲ್ಲಿ ಹೋಗಿದ್ದು 3 ಗಂಟೆಯಾದರೂ ವಾಪಾಸು ಮನೆಗೆ ಬಂದಿರುವುದಿಲ್ಲ ನಂತರ ಎಲ್ಲಾ ಕಡೆ ಹುಡುಕಾಡಿದ್ದು ದಿನಾಂಕ 10/11/2025 ರಂದು ಮಧ್ಯಾಹ್ನ ಸುಮಾರು 14:55 ಗಂಟೆಗೆ ಪೆರ್ಡೂರು ಗ್ರಾಮದ ಕುಕ್ಕುಂಡಿ ಹೊಳೆಬಾಗಿಲಿನ ಮಡಿಸಾಲು ಹೊಳೆಯಲ್ಲಿ ಒಂದು ಮೃತದೇಹ ಕಂಡುಬಂದಿದ್ದು ಊರಿನವರ ಸಹಾಯದಿಂದ ದಡಕ್ಕೆ ತಂದು ನೋಡುವಾಗ ಶ್ರೀಶಾನ್‌ನ ಮೃತದೇಹವಾಗಿದ್ದು ಶ್ರೀಶಾನ್‌ನು ದಿನಾಂಕ 09/11/2025 ರಂದು 12:15 ಗಂಟೆ ಸಮಯಕ್ಕೆ ಪೆರ್ಡೂರು ಗ್ರಾಮದ ಮಡಿಸಾಲು ಹೊಳೆಗೆ ಈಜಲು ಹೋದವನು ನೀರಿದಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ.
ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.



