Home Latest ಬಂಕೇರಕಟ್ಟ ನೂತನ ಸೇತುವೆಗೆ ₹5 ಕೋಟಿ ಅನುದಾನ ಮಂಜೂರು : ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್‌ಗೆ...

ಬಂಕೇರಕಟ್ಟ ನೂತನ ಸೇತುವೆಗೆ ₹5 ಕೋಟಿ ಅನುದಾನ ಮಂಜೂರು : ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್‌ಗೆ ಸೂರಜ್ ಕಲ್ಮಾಡಿ ಅಭಿನಂದನೆ..!

ಉಡುಪಿ: ಕಲ್ಮಾಡಿ–ಕಿದಿಯೂರು ಮುಖ್ಯ ರಸ್ತೆಯ ಬಂಕೇರಕಟ್ಟದಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಕರ್ನಾಟಕ ಸರ್ಕಾರವು ಲೋಕೋಪಯೋಗಿ ಇಲಾಖೆಯ ಮೂಲಕ ₹5 ಕೋಟಿ ಅನುದಾನ ಮಂಜೂರು ಮಾಡಿದೆ.

ಈ ಅನುದಾನ ಮಂಜೂರಿಗೆ ಶ್ರಮಿಸಿದ ಕಾಂಗ್ರೆಸ್ ಮುಖಂಡ ಪ್ರಸಾದ್‌ರಾಜ್ ಕಾಂಚನ್ ಅವರಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಸೂರಜ್ ಕಲ್ಮಾಡಿ ಅಭಿನಂದನೆ ಹಾಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

 

ಈ ಸೇತುವೆ ನಿರ್ಮಾಣದಿಂದ ಕಲ್ಮಾಡಿ, ಕಿದಿಯೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗಲಿದ್ದು, ಸ್ಥಳೀಯರು ಈ ಯೋಜನೆಯನ್ನು ಸ್ವಾಗತಿಸಿದ್ದಾರೆ. ಸರ್ಕಾರದಿಂದ ಅನುದಾನ ಮಂಜೂರಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ಶೀಘ್ರದಲ್ಲೇ ಆರಂಭವಾಗುವ ನಿರೀಕ್ಷೆ ವ್ಯಕ್ತವಾಗಿದೆ.