ಪರ್ಕಳ: ಜೆಸಿಐ ಪರ್ಕಳ ವತಿಯಿಂದ “ಯುವ ಉತ್ಸವ 2026” ಎಂಬ ಬೃಹತ್ ಸಾಂಸ್ಕೃತಿಕ ಮತ್ತು ಪ್ರತಿಭಾ ಸ್ಪರ್ಧಾ ಕಾರ್ಯಕ್ರಮವನ್ನು ಜೂನ್ 28, 2026 ರಂದು ಶ್ರೀ ವಿಘ್ನೇಶ್ವರ ಸಭಾಭವನ, ಪರ್ಕಳದಲ್ಲಿ ಪೂರ್ಣ ದಿನದ ಕಾರ್ಯಕ್ರಮವಾಗಿ ಆಯೋಜಿಸಲಾಗಿದೆ.
ಈ ಕುರಿತು ಜೆಸಿಐ ಪರ್ಕಳ ಅಧ್ಯಕ್ಷರಾದ ಜೆಎಫ್‌ಎಂ ಭರತ್ ಕೆ. ಕುಲಾಲ್, ಯೋಜನಾ ನಿರ್ದೇಶಕರಾದ ಜೆಸಿ ಮರಿಯಪ್ಪ ಹಾಗೂ ಜೆಸಿ ಉಷಾ ಕಲ್ಮಾಡಿ ಅವರು ಪ್ರಕಟಣೆ ನೀಡಿದ್ದಾರೆ.
ಇಂದಿನ ತಂತ್ರಜ್ಞಾನ ಯುಗದಲ್ಲಿ ಜನರ ನಡುವೆ ನೇರ ಸಂಪರ್ಕ ಮತ್ತು ಸಾಮಾಜಿಕ ಬಾಂಧವ್ಯ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ವಿದ್ಯಾರ್ಥಿಗಳು, ಯುವಕರು ಹಾಗೂ ಸಾರ್ವಜನಿಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಪರಸ್ಪರ ಸ್ನೇಹ, ಸಹಕಾರ ಮತ್ತು ಸಾಂಸ್ಕೃತಿಕ ವಿನಿಮಯವನ್ನು ಉತ್ತೇಜಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಯುವ ಉತ್ಸವ 2026ರಲ್ಲಿ ವಿವಿಧ ಪ್ರತಿಭಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದ ಪ್ರಮುಖ ಸ್ಪರ್ಧೆಗಳು:
- ಚಿತ್ರಕಲಾ ಸ್ಪರ್ಧೆ (ಶಾಲಾ ವಿದ್ಯಾರ್ಥಿಗಳಿಗೆ 4 ವಿಭಾಗಗಳು)
- ರಂಗೋಲಿ ಸ್ಪರ್ಧೆ (ಮುಕ್ತ ವಿಭಾಗ)
- ರಸಪ್ರಶ್ನೆ ಸ್ಪರ್ಧೆ (ಪ್ರೌಢಶಾಲಾ ವಿದ್ಯಾರ್ಥಿಗಳಿಗೆ)
- ಗಾಯನ ಸ್ಪರ್ಧೆ (ಮುಕ್ತ ವಿಭಾಗ)
- ಕೇಶ ವಿನ್ಯಾಸ ಸ್ಪರ್ಧೆ
- ಮೆಹೆಂದಿ ಸ್ಪರ್ಧೆ
- ಕಿರುಚಿತ್ರ ಸ್ಪರ್ಧೆ
- ನೃತ್ಯ ಸ್ಪರ್ಧೆ
- ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ನೀಡಿ ಗೌರವಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ಯಾವುದೇ ಪ್ರವೇಶ ಶುಲ್ಕವನ್ನು ವಿಧಿಸಲಾಗಿಲ್ಲ.
- ಕಾರ್ಯಕ್ರಮದ ಒಟ್ಟು ಅಂದಾಜು ವೆಚ್ಚ ಸುಮಾರು ₹2 ಲಕ್ಷ ಆಗಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ದಾನಿಗಳು, ಪ್ರಾಯೋಜಕರು ಮತ್ತು ಹಿತೈಷಿಗಳ ಸಹಕಾರವನ್ನು ಜೆಸಿಐ ಪರ್ಕಳ ಕೋರಿದೆ.
- ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು, ಜನರನ್ನು ಒಟ್ಟುಗೂಡಿಸುವುದು ಮತ್ತು ಸಮಾಜದಲ್ಲಿ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
“ಯುವ ಉತ್ಸವ 2026 – ಪ್ರತಿಭೆಗಳ ಸಂಭ್ರಮ, ಬಾಂಧವ್ಯದ ಬೆಸುಗೆ” – ಜೆಸಿಐ ಪರ್ಕಳ..



