ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಕೆರೆಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಬ ಗ್ರಾಮದ ಎಲ್ಸಾರ್ ಬಳಿ ಶುಕ್ರವಾರ ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಮುಂದಾಗಿದ್ದು, ರವಿವಾರ ಕಾಡಾನೆ ಸೆರೆಗೆ ಕಾರ್ಯಾಚರಣೆಯನ್ನು ಆರಂಭಿಸಿದೆ.
ಕಾರ್ಯಚರಣೆಗಾಗಿ ಏಕಲವ್ಯ, ಧನಂಜಯ, ಪ್ರಶಾಂತ ಹಾಗೂ ಹರ್ಷ ಸೇರಿ 6 ಆನೆಗಳು ಶೃಂಗೇರಿ ತಾಲೂಕಿನ ಕೆರೆಕಟ್ಟೆ ಚೆಕ್ ಪೋಸ್ಟ್ ಬಳಿ ಬಂದು ಇಳಿದಿದೆ.
ಕೆರೆಮನೆ ಗ್ರಾಮದ ಸುತ್ತಮುತ್ತ ಇರುವ ಒಂಟಿ ಸಲಗವು, ನಿನ್ನೆ ಕೂಡ ರೈತರಿಗೆ ಕಾಣಿಸಿಕೊಂಡು ತೋಟ ನಾಶಮಾಡಿತ್ತು ಎಂದು ತಿಳಿದು ಬಂದಿದೆ.
ಕಾಡಾನೆಯ ಪತ್ತೆಗೆ ಕೂಬಿಂಗ್ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯಿಂದ ಪ್ರಾರಂಭಿಸಿದೆ.



