ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ. ಅರುಣ್….
ಪುತ್ತೂರು: ಈಶ್ವರಮಂಗಲ ಸಮೀಪದ ಬೆಳ್ಳಿಚಡಾವು ಬಳಿ ಅಕ್ರಮ ಗೋ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ಗ್ರಾಮಾಂತರ ಠಾಣಾ ಇನ್‌ಸ್ಪೆಕ್ಟರ್‌ಗೆ ಚಾರ್ಜ್ ಮೆಮೋ ಜಾರಿ ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಘಟನೆಯ ಬಳಿಕ ಅರುಣ್ ಕುಮಾರ್ ಪುತ್ತಿಲ ಸ್ಥಳಕ್ಕೆ ಬಂದು ಒಂದು ಜಾನುವಾರು ಸತ್ತಿರುವುದನ್ನು ಗಮನಿಸಿ ಉಳಿದ ಜಾನುವಾರುಗಳಿಗೆ ತೊಂದರೆಯಾಗುತ್ತದೆ.
ಆದ್ದರಿಂದ ಅದರಲ್ಲಿ ಇರುವ ಜಾನುವಾರುಗಳನ್ನು ಇಳಿಸಬಹುದೇ ಎಂದು ಕೇಳಿದ್ದಾರೆ. ಅನಂತರ ಕಾನ್‌ಸ್ಟೆಬಲ್ ಇನ್‌ಸ್ಪೆಕ್ಟರ್‌ಗೆ ದೂರವಾಣಿ ಮೂಲಕ ವಿಷಯ ತಿಳಿಸುವಾಗ ಅರುಣ್ ಕುಮಾರ್‌ಪುತ್ತಿಲ ಮೊಬೈಲ್ ಕೇಳಿ ಪಡೆದುಕೊಂಡು ಇನ್‌ಸ್ಪೆಕ್ಟರ್ ಜತೆ ಮಾತನಾಡಿದ್ದರು ಮತ್ತು ಅದಕ್ಕೆ ಅದಕ್ಕೆ ಒಪ್ಪಿಗೆ ಪಡೆದಿದ್ದರು. ಆದರೆ ಇಲ್ಲಿ ಮುನ್ನೆಚ್ಚರಿಕೆ ವಹಿಸದೆ ಅಪರಾಧ ಸ್ಥಳವನ್ನು ರಾಜಕೀಯ ವೇದಿಕೆಯಾಗಿ ತಿರುಚುವ ಅವಕಾಶವಿರುವ ತಪ್ಪು ನಿರ್ಣಯ ತೆಗೆದುಕೊಂಡಿರುವುದು ಇನ್‌ಸ್ಪೆಕ್ಟರ್ ತಪ್ಪಾಗಿದ್ದು ಆದ್ದರಿಂದ ಇನ್‌ಸ್ಪೆಕ್ಟರ್‌ಗೆ ಚಾರ್ಜ್ ಮೆಮೋ ನೀಡಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



