Home Crime ಮಣಿಪಾಲ : ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ…!!

ಮಣಿಪಾಲ : ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ…!!

ಮಣಿಪಾಲ : ಮನೆಯ ಬಾವಿಯ ರಾಟೆ ಅಳವಡಿಸುವ ಅಡ್ಡಪಟ್ಟಿಗೆ ಹಗ್ಗದಿಂದ ನೇಣು ಬಿಗಿದುಕೊಂಡು ಮನೆ ಯಜಮಾನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೆರಂಪಳ್ಳಿಯಲ್ಲಿ ನಡೆದಿದೆ.

ಆತ್ಮಹತ್ಯೆಗೆ‌ ಸ್ವಷ್ಟ ಕಾರಣ ತಿಳಿದುಬಂದಿಲ್ಲ. ಮೃತ ವ್ಯಕ್ತಿ ದೇವೇಂದ್ರ ನಾಯ್ಕ್ (65 ವ) ಎಂದು ಗುರುತಿಸಲಾಗಿದೆ.

ಮಣಿಪಾಲ ಪೋಲಿಸ್ ಠಾಣೆಯ ಎ ಎಸ್ ಐ ಮನೋಹರ್, ಹೆಡ್ ಕಾನ್ಸಟೇಬಲ್ ಜ್ಯೋತಿ ನಾಯ್ಕ್, ಅರುಣಾ ಘಟನಾ ಸ್ಥಳದಲ್ಲಿದ್ದು ಕಾನೂನು ಪ್ರಕ್ರಿಯೆ ನಡೆಸಿದರು. ಮರಣೋತ್ತರ‌ ಪರೀಕ್ಷೆ ನಡೆಸಲು, ಶವವನ್ನು ಮಣಿಪಾಲದ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ‌ ಒಳಕಾಡು ಠಾಣೆಗೆ ನೆರವಾದರು.