Home Latest ಫ್ಲಾಸ್ಕ್ ನಲ್ಲಿ ಬಿಸಿ ಚಹಾ ಕುಡಿದು ನಾಲ್ಕು ವರ್ಷದ ಮಗು ಮೃತ್ಯು…!!

ಫ್ಲಾಸ್ಕ್ ನಲ್ಲಿ ಬಿಸಿ ಚಹಾ ಕುಡಿದು ನಾಲ್ಕು ವರ್ಷದ ಮಗು ಮೃತ್ಯು…!!

ಆಂದ್ರಪ್ರದೇಶ :  ಮಕ್ಕಳಿಗೆ ಚಹಾ ಕುಡಿಸುವ ಪೋಷಕರೇ ಎಚ್ಚರ, ಮನೆಯಲ್ಲಿದ್ದ ಫ್ಲಾಸ್ಕ್ ನಲ್ಲಿ ಬಿಸಿ ಚಹಾ ಕುಡಿದು ನಾಲ್ಕು ವರ್ಷದ ಮಗು ದುರಂತ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಯಡಿಕಿಯಲ್ಲಿ ಈ ಘಟನೆ ನಡೆದಿದೆ. ರಾಮಸ್ವಾಮಿ ಮತ್ತು ಚಾಮುಂಡೇಶ್ವರಿ ದಂಪತಿ ಯಡಿಕಿಯ ಚೆನ್ನಕೇಶವಸ್ವಾಮಿ ಕಾಲೋನಿಯಲ್ಲಿ ವಾಸಿಸುತ್ತಿದ್ದಾರೆ. ಅವರ ನಾಲ್ಕು ವರ್ಷದ ರುತ್ವಿಕ್ ಮೂರು ದಿನಗಳ ಹಿಂದೆ ಮನೆಯಲ್ಲಿ ಫ್ಲಾಸ್ಕ್ ನಲ್ಲಿ ಇಟ್ಟಿದ್ದ ಚಹಾ ಕುಡಿದಿದ್ದಾನೆ.

ಚಹಾ ಬಿಸಿಯಾಗಿದ್ದರಿಂದ ನಾಲ್ಕು ವರ್ಷದ ಬಾಲಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಪೋಷಕರು ತಕ್ಷಣ ಆತನನ್ನು ಚಿಕಿತ್ಸೆಗಾಗಿ ತಡಿಪತ್ರಿಗೆ ಕರೆದೊಯ್ದರು. ಅಲ್ಲಿಂದ ಉತ್ತಮ ಚಿಕಿತ್ಸೆಗಾಗಿ ಅನಂತಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ.