ಉಡುಪಿ : ವಾರ್ಷಿಕ ಸರ್ವ ಸದಸ್ಯರ ಸಭೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಎಕೆಬಿಎಂಎಸ್ ನಲ್ಲಿ ನೆಡೆಯಿತು. 2026-27ನೇ ಸಾಲಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಚುನಾವಣೆ ಮತದಾನದ ಮೂಲಕ ಬಾಬು ಜಿ ಎಸ್ ಚುನಾವಣಾ ಅಧಿಕಾರಿ ಸಮ್ಮುಖದಲ್ಲಿಜರಗಿತು
ಅಧ್ಯಕ್ಷ ಸ್ಥಾನಕ್ಕೆ ರಮೇಶ್ ಬಿ.ಕೆ. ಅವರು ಚುನಾವಣೆಯಲ್ಲಿ ಆಯ್ಕೆಯಾದರು, ಉಪಾಧ್ಯಕ್ಷ ರಾಗಿ ಎಸ್ ರಘು, ಕಾರ್ಯದರ್ಶಿಯಾಗಿ ಪ್ರದೀಪ್ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಸಹ ಕಾರ್ಯದರ್ಶಿಯಾಗಿ ಸುಧೀರ್ ಹೆಬ್ಬಾರ್, ಖಜಾಂಚಿಯಾಗಿ ಪ್ರಸನ್ನ ಕುಲಕರ್ಣಿ ಆಯ್ಕೆಯಾದರು.
ನಿರ್ದೇಶಕರುಗಳಾಗಿ ಆರ್. ಜಿ.ಭಟ್, ಪ್ರಸನ್ನ ಎನ್ ಎಸ್., ಕಾಶಿ ಸುಬ್ರಮಣ್ಯ, ಚಂದ್ರಶೇಖರ ಎಸ್ ಆರ್, ಜೂಪಿಟರ್ ಮಂಜುನಾಥ್, ರಮೇಶ್ ಭಟ್, ಸತ್ಯಪ್ರಕಾಶ್, ರಾಘವೇಂದ್ರ ರಾವ್, ಶ್ರೀನಿವಾಸ್ ವೈಕೆ, ಆರ್ ಕೃಷ್ಣ, ಲಕ್ಷ್ಮಿಕಾಂತ್ ಆರ್ ಆಯ್ಕೆಯಾದರು
ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳಿಂದ ವಿಪ್ರ ಛಾಯಾಗ್ರಹಾಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್ ರಘುನಾಥ್ ಅವರು ವಿತರಿಸಿ, ಪ್ರತಿಭಾವಂತ ಮಕ್ಕಳಿಗೆ ತಂದೆ ತಾಯಿಗಳಿಗೆ ಗುರುಗಳಿಗೆ ಶುಭಾಶಯ ಕೋರಿದರು.
ಅಧ್ಯಕ್ಷರು ಮಾತನಾಡುತ್ತಾ ಛಾಯಾಗ್ರಹಕರ ಸಂಘಟನೆ ಮಹಾಸಭಾದೊಂದಿಗೆ ನಿಕಟ ಸಂಬಂಧ ಹೊಂದಿದ್ದು ನಮಗೆ ಹಿಂದಿನಿಂದಲೂ ಸಹಕಾರ ನೀಡುತ್ತಾ ಬಂದಿದ್ದಾರೆ. ಮಹಾಸಭಾ ವತಿಯಿಂದ ತಮಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಅಧ್ಯಕ್ಷ ರಮೇಶ್ ಬಿ.ಕೆ. ಅವರು ಮಾತನಾಡುತ್ತಾ ರಾಜ್ಯಾದ್ಯಂತ ಇರುವ ಎಲ್ಲಾ ವಿಪ್ರ ಛಾಯಾಗ್ರಹಕರುಗಳು ಹಾಗೂ ವೀಡಿಯೋಗ್ರಾಫರ್ಸ್ಗಳು ಸದಸ್ಯರಾಗಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವಂತೆ ಮನವಿ ಮಾಡಿದರು.





