ಸೃಷ್ಠಿ ಶೈಕ್ಷಣಿಕ ಸಂಸ್ಥೆಯ ಸ್ಥಾಪಕ ಪ್ರೊ. ಗೋಪಾಲಕೃಷ್ಣ ಡಿ, ರವರಿಗೆ ಚಿತ್ರಸಂತೆ ‘ಕರ್ನಾಟಕ ಅಚೀವರ್ಸ್ ಪ್ರಶಸ್ತಿ-2026’ ಪ್ರದಾನ…
ಬೆಂಗಳೂರು: ಫೆ.3: ನಗರದ ಹೈಡ್ ಪಾರ್ಕ್ ಅಪಾರ್ಟ್ ಹೋಟೆಲ್ ನಲ್ಲಿ ಆಯೋಜಿಸಿದ್ದ ಚಿತ್ರಸಂತೆ ಸಂಸ್ಥೆಯ ವತಿಯಿಂದ 2026 ನೇ ಸಾಲಿನ ಕೊಡಮಾಡುವ ಕನ್ನಡ ನಾಡಿನ ಹೆಮ್ಮೆಯ ಸಾಧಕರು, ಅತ್ಯುತ್ತಮ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದ ಅವಿಸ್ಮರಣೀಯ ಸೇವೆಗಾಗಿ ‘ಕರ್ನಾಟಕ ಅಚೀವರ್ಸ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಿತು.
ಬೆಂಗಳೂರು ನಗರ ನಿವಾಸಿ ಶ್ರೀಮತಿ ಪುಷ್ಪ ಮತ್ತು ಶ್ರೀ ದೇವರಾಜು ದಂಪತಿಯ ಪುತ್ರರು, ಪ್ರಸ್ತುತ ಸೃಷ್ಠಿ ಕಾಲೇಜ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್‌ಮೆಂಟ್ ಅಂಡ್ ರಿಸರ್ಚ್ ಸೆಂಟರ್ ಮತ್ತು ಡಿಪಿಎನ್ ಕಾನೂನು ಮಹಾವಿದ್ಯಾಲಯದ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಪ್ರೊ. ಗೋಪಾಲ ಕೃಷ್ಣ ಡಿ, ಇವರು ಕಳೆದ ಹತ್ತು ದಶಕದಿಂದಲೂ ತಮ್ಮ ತನ ಮನ ದನ ಮೂಲಕ ಬೆಂಗಳೂರಿನಲ್ಲಿ ನಿರಂತರವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿದ ಇವರ ಸಾಧನೆಯನ್ನು ಗುರುತಿಸಿದ ಚಿತ್ರಸಂತೆ ಸಂಸ್ಥೆಯ 2026 ನೇ ಸಾಲಿನ ಕೊಡಮಾಡುವ ಕನ್ನಡ ನಾಡಿನ ಹೆಮ್ಮೆಯ ಸಾಧಕರಿಗೆ ‘ಕರ್ನಾಟಕ ಅಚೀವರ್ಸ್ ಪ್ರಶಸ್ತಿ’ಯನ್ನು ಸೃಷ್ಠಿ ಶೈಕ್ಷಣಿಕ ಸಂಸ್ಥೆಯ ಸಂಸ್ಥಾಪಕರಾದ ಪ್ರೊ.ಗೋಪಾಲಕೃಷ್ಣ ಡಿ, ರವರಿಗೆ ‘ಕರ್ನಾಟಕ ಅಚೀವರ್ಸ್ ಪ್ರಶಸ್ತಿ 2026’ ಪ್ರದಾನ ಮಾಡಲಾಯಿತು.
ನಂತರ ಮಾತನಾಡಿದ ಚಿತ್ರಸಂತೆ ಸಂಸ್ಥೆಯ ಅಧ್ಯಕ್ಷರು ಹಾಗೂ ಮುಖ್ಯ ಸಂಪಾದಕರಾದ ಶ್ರೀ ಗಿರೀಶ್ ವಿ. ಗೌಡ್ರು ಅವರು ,ನಮ್ಮ ಸಮಾಜದಲ್ಲಿ ಬಡವರಿಗೆ ಅತ್ಯಂತ ದೊಡ್ಡ ಮಟ್ಟದ ಶೈಕ್ಷಣಿಕ ಕ್ಷೇತ್ರದಲ್ಲಿ ಗುಣಮಟ್ಟದ ಅವಕಾಶಗಳನ್ನು ನೀಡಿದವರು. ಇನ್ನೂ ಅತ್ಯಂತ ನಿಷ್ಠೆಯಿಂದ ಸೇವೆ ಸಲ್ಲಿಸಿರುವ ಪ್ರೊ.ಗೋಪಾಲಕೃಷ್ಣ ಡಿ, ರವರನ್ನು ಗೌರವಿಸುವ ಭಾಗ್ಯ ನಮಗೆ ಸಿಕ್ಕಿದೆ. ವ್ಯಕ್ತಿತ್ವವು ಕೇವಲ ಅಧಿಕಾರದಿಂದ ದೊಡ್ಡದಾಗುವುದಿಲ್ಲ, ಅವರು ಮಾಡುವ ಕೆಲಸ ಹಾಗೂ ಸಮಾಜದ ಮೇಲಿನ ಕಾಳಜಿಯಿಂದ ದೊಡ್ಡದಾಗುತ್ತದೆ ಎನ್ನುವುದಕ್ಕೆ ಇವರೇ ಸಾಕ್ಷಿ. ಇವರು ಕಳೆದ ಹತ್ತು ದಶಕದಿಂದಲೂ ಶೈಕ್ಷಣಿಕ ರಂಗ, ಮತ್ತಿತರರ ಸೇರಿದಂತೆ ರಾಜ್ಯದ ಪ್ರತಿಯೊಬ್ಬ ಆಕಾಂಕ್ಷಿಗಳಿಗೆ ಅತಿ ಕಡಿಮೆ ಮಟ್ಟದಲ್ಲಿ ಗುಣಮಟ್ಟದ ಶೈಕ್ಷಣಿಕ ಸೇವೆಯನ್ನು ನೀಡಿದ ಕೀರ್ತಿ ನಿಜಕ್ಕೂ ಮೆಚ್ಚುವಂತದ್ದು. ಕಷ್ಟದ ಸಮಯದಲ್ಲಿಯೂ ದೃತಿಗೆಡದೆ ಅವರು ತೋರಿದ ಹಾದಿ ನಮ್ಮಂತಹ ಅನೇಕರಿಗೆ ಸ್ಫೂರ್ತಿ ಎಂದು ತಿಳಿಸಿದರು.
ಸನ್ಮಾನಿತರಾದ ಪ್ರೊ.ಗೋಪಾಲಕೃಷ್ಣ ಡಿ, ಅವರು ಮಾತಾನಾಡಿ, ತಮ್ಮ ಮಾತಿನ ಮೂಲಕ ಸನ್ಮಾನ ಎಂದರೆ ಕೇವಲ ಶಾಲು ಹೊದಿಸಿ ಹಾರ ಹಾಕಿ ಗೌರವಿಸುವುದಲ್ಲ. ಇದೊಂದು ಸಾಧನೆಗೈದವರ ನಿಸ್ವಾರ್ಥ ಸೇವೆಗೆ ನಾವು ಸಲ್ಲಿಸುತ್ತಿರುವ ಸಣ್ಣ ಕೃತಜ್ಞತೆ. ಇಂತಹ ಸಾಧಕರನ್ನು ಗೌರವಿಸುವುದರ ಮೂಲಕ ನಾವೆಲ್ಲರೂ ಒಳ್ಳೆಯ ಕೆಲಸ ಮಾಡಲು ಪ್ರೇರಣೆ ಪಡೆಯುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಕನ್ನಡ ಚಲನಚಿತ್ರ ರಂಗದ ಖ್ಯಾತ ನಟ ಪೃಥ್ವಿ ಅಂಬಾರ್ ಹಾಗೂ ನಟಿ ಧಾನ್ಯ ರಾಮ್ ಕುಮಾರ್, ವಿವಿಧ ತಾರೆಯರು, ನಾಡಿನ ಸಾಧಕರು, ಸಂಶೋಧಕರು ಮತ್ತು ಪತ್ರಕರ್ತರು ಈಶ್ವರ್ ಸಿರಿಗೇರಿ, ಗಣ್ಯರು ಪಾಲ್ಗೊಂಡು ಸನ್ಮಾನಿಸಿದರು. ಚಿತ್ರಸಂತೆ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ಫೋಟೋ ಕ್ಯಾಪ್ಷನ್:
ಶೈಕ್ಷಣಿಕ ಕ್ಷೇತ್ರದಲ್ಲಿ ಅವಿಸ್ಮರಣೀಯ ಸೇವೆಗಾಗಿ ಚಿತ್ರಸಂತೆ ಸಂಸ್ಥೆಯ 2026 ನೇ ಸಾಲಿನ ಕೊಡಮಾಡುವ ‘ಕರ್ನಾಟಕ ಅಚೀವರ್ಸ್ ಪ್ರಶಸ್ತಿ’ಯನ್ನು ಸೃಷ್ಟಿ ಶೈಕ್ಷಣಿಕ ಮತ್ತು ಸಂಶೋಧನಾ ಕೇಂದ್ರ ಮತ್ತು ಡಿಪಿಎನ್ ಕಾನೂನು ಮಹಾವಿದ್ಯಾಲಯದ ಸಂಸ್ಥೆಯ ಸಂಸ್ಥಾಪಕ ಹಾಗೂ ಅಧ್ಯಕ್ಷ ಪ್ರೊ. ಗೋಪಾಲಕೃಷ್ಣ ಡಿ, ರವರಿಗೆ ನಟ ಪೃಥ್ವಿ ಅಂಬಾರ್, ನಟಿ ಧಾನ್ಯ ರಾಮ್ ಕುಮಾರ್, ಚಿತ್ರಸಂತೆ ಸಂಸ್ಥೆಯ ಅಧ್ಯಕ್ಷ ಗಿರೀಶ್ ವಿ. ಗೌಡ್ರು ಮತ್ತಿತರರು ಸೇರಿ ಗಣ್ಯರು ಪ್ರದಾನ ಮಾಡಿದರು.




