ಮುಲ್ಕಿ : ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಸಮೀಪ ಗಾಂಜಾ ಸೇವನೆ ಮಾಡುತ್ತಿದ್ದ ಮೂವರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು 1) ಪ್ರಮೋದ್ ಕುಮಾರ್, (2) ಸ್ಟೀವನ್ ವಿ ಮತ್ತು (3) ಪ್ರಜ್ವಲ್ ಎಂದು ಗುರುತಿಸಲಾಗಿದೆ.
ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದ್ದಾರೆ.
ದಿನಾಂಕ:14-09-2025 ರಂದು ಪಿರ್ಯಾದಿದಾರರಾದ ಮುಲ್ಕಿ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಉಮೇಶ್ ಕುಮಾರ್ ಎಂ.ಎನ್ ರವರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿ ಸಂಚರಿಸುತ್ತಿದ್ದಾಗ ಸಂಜೆ 16-30 ಗಂಟೆಗೆ ಅತ್ತೂರು ಕಾಪಿಕಾಡು ಖಾಲಿ ಗುಡ್ಡೆ ಜಾಗದಲ್ಲಿ ಮೂವರು ಯುವಕರು ಹೊಗೆ ಬತ್ತಿಯನ್ನು ಸೇದುತ್ತಿರುವುದು ಕಂಡು ಬಂದಿರುತ್ತದೆ. ಬಳಿಕ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಯುವಕರು ತಡವರಿಸುತ್ತಾ ಬಳಿಕ ತಾವುಗಳು ಹೊಗೆ ಬತ್ತಿಯೊಂದಿಗೆ ಗಾಂಜವನ್ನು ಸೇರಿಸಿ ಸೇದಿರುವುದಾಗಿ ತಮ್ಮ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಬಳಿಕ ಆರೋಪಿಗಳನ್ನು ಪರೀಕ್ಷಿಸಲು ಮಂಗಳೂರು ಎ.ಜೆ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಆರೋಪಿಗಳು ಗಾಂಜಾ ಸೇವನೆ ಮಾಡಿರುವುದಾಗಿ ವೈದ್ಯರು ದೃಡಪತ್ರ ನೀಡಿರುತ್ತಾರೆ. ಆರೋಪಿಗಳಾದ (1) ಪ್ರಮೋದ್ ಕುಮಾರ್, (2) ಸ್ಟೀವನ್ ವಿ ಮತ್ತು (3) ಪ್ರಜ್ವಲ್ ಎಂಬವರು ಮಾದಕ ವಸ್ತುವಾದ ಗಾಂಜಾವನ್ನು ಸೇವನೆ ಮಾಡಿರುವುದರಿಂದ ಅರೋಪಿಯ ವಿರುಧ್ದ ಕ್ರಮಕ್ಕಾಗಿ ದೂರು ನೀಡಿದ್ದಾಗಿದೆ.