Home Crime ಗುಜರಾತ್‌ನ ಕೊಲೆ ಪ್ರಕರಣದ ಆರೋಪಿ 19 ವರ್ಷ ಬಳಿಕ ಉಡುಪಿಯಲ್ಲಿ ಅರೆಸ್ಟ್…!!

ಗುಜರಾತ್‌ನ ಕೊಲೆ ಪ್ರಕರಣದ ಆರೋಪಿ 19 ವರ್ಷ ಬಳಿಕ ಉಡುಪಿಯಲ್ಲಿ ಅರೆಸ್ಟ್…!!

ಉಡುಪಿ : 2007ರಲ್ಲಿ ಗುಜರಾತಿನಲ್ಲಿ ನಡೆದ ದರೋಡೆ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿಯೊಬ್ಬ ಬರೋಬ್ಬರಿ 19 ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಿ ಓಡಾಡಿಕೊಂಡಿದ್ದ. ಈತನನ್ನು ಕೊನೆಗೂ ಕರ್ನಾಟಕದಲ್ಲಿ ಬಂಧಿಸುವಲ್ಲಿ ಸೂರತ್‌ನ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಡುಪಿಯಲ್ಲಿ ವ್ಯಾಪಾರಿಯಾಗಿ ಬದುಕುತ್ತಿದ್ದ ಈತನನ್ನು ಬಂಧಿಸಲು ಪೊಲೀಸರು ವ್ಯಾಪಾರಿಗಳಂತೆ ಮಾರುವೇಷ ಧರಿಸಿದ್ದು, ಸಲುಗೆಯಿಂದ ಆತನೊಡನೆ ಮಾತನಾಡಿ, ಗುರುತು ಪತ್ತೆ ಮಾಡಿ ಬಂಧಿಸಿದ್ದಾರೆ.

ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನೆಯಲ್ಲೇ ದರೋಡೆ ಮಾಡಿ ಈತ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.