ಉಡುಪಿ : ನಗರದಲ್ಲಿ ಆನ್ ಲೈನ್ ವಂಚನೆ ಮಾಡಿದ್ದ 4 ಮಂದಿ ಆರೋಪಿಗಳನ್ನು ಸೆನ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳು ಮೊಹಮ್ಮದ್ ಕೈಸ್, ಅಹಮದ್ ಅನ್ವೀಜ್, ಸಪ್ವಾನ್, ತಾಸೀರ್ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ, 4,00,000/- ನಗದು ಸ್ವಾಧೀನಪಡಿಸಲಾಗಿದೆ
ಪಿರ್ಯಾದಿ ಜೊಸ್ಸಿ ರವೀಂದ್ರ ಡಿಕ್ರೂಸ್(54), ಮಾರ್ಕೇಟ್ ರಸ್ತೆ, ಶಂಕರಪುರ, ಕಾಪು ರವರಿಗೆ ಫೇಸ್ ಬುಕ್ ಮೂಲಕ Arohi Agarwal ಎಂಬ ಮಹಿಳೆಯ ಪರಿಚಯವಾಗಿದ್ದು 2025ರ ಫೆಬ್ರವರಿ ತಿಂಗಳಲ್ಲಿ ಅವಳ ವಾಟ್ಸಾಪ್ ನಂಬ್ರವನ್ನು ನೀಡಿ FXCM Gold Tradingಗೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ಮೆಸೇಜ್ ಮಾಡಿದ್ದು ಅದನ್ನು ನಂಬಿದ ಪಿರ್ಯಾದಿದಾರರು ತಮ್ಮ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು 75,00,000/- ರೂಪಾಯಿ ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಈ ಬಗ್ಗೆ ಜೊಸ್ಸಿ ರವೀಂದ್ರ ಡಿಕ್ರೂಸ್ ರವರು ನೀಡಿದ ದೂರಿನಂತೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 21/2025 ಕಲಂ 66(ಸಿ) 66(ಡಿ) ಐ.ಟಿ. ಆಕ್ಟ್ ಮತ್ತು 318(4) ಬಿಎನ್‌ಎಸ್ ಆಕ್ಟ್ ಯಂತೆ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ್ ಶಂಕರ್ ಐಪಿಎಸ್ ರವರ ಆದೇಶದಂತೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯಕ್ ಮತ್ತು ಸಹಾಯಕ ಪೊಲೀಸ್ ಉಪಾಧೀಕ್ಷಕರಾದ ಡಾ. ಹರ್ಷ ಪ್ರಿಯಂವದ ಐಪಿಎಸ್ ರವರ ನಿರ್ದೇಶನ ಮೇರೆಗೆ ಸೆನ್ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್, ಠಾಣಾ ಎ.ಎಸ್.ಐ ಉಮೇಶ್ ಜೋಗಿ, ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ಪ್ರವೀಣ ಶೆಟ್ಟಿಗಾರ್, ವೆಂಕಟೇಶ್, ಧರ್ಮಪ್ಪ, ರಾಘವೇಂದ್ರ, ರಾಜೇಶ್ , ದೀಕ್ಷಿತ್, ರವರನ್ನೊಳಗೊಂಡ ವಿಶೇಷ ತಂಡವು ಆರೋಪಿಗಳಾದ 1) ಮೊಹಮದ್ ಕೈಸ್(20), ತಂದೆ: ಅಬ್ದುಲ್ ಖಾದರ್, ವಾಸ; ಮನೆ ನಂಬ್ರ, ಪ್ರೇಮ್ ನಗರ, ಕೋಡಿಕೆರೆ ಗ್ರಾಮ, ಸುರತ್ಕಲ್, ಮಂಗಳೂರು ತಾಲೂಕು. ದ,ಕ ಜಿಲ್ಲೆ (2) ಅಹಮದ್ ಅನ್ವೀಜ್(20), ತಂದೆ: H A ಅಕ್ಬರ್ ವಾಸ; ಮನೆ ನಂಬ್ರ 3-676/2, ಅವೀಜ್ ಮಂಜಿಲ್, ಮಂಜತೋಟ, ಕನ್ನಂಗಾರ್, ಹೆಜಮಾಡಿ, ನಡ್ಸಾಲ್ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ (3) ಸಪ್ವಾನ್(30), ತಂದೆ: ದಿ/ ಎಸ್. ಮಹಮ್ಮದ್, ವಾಸ: ಮನೆ ನಂಬ್ರ #15-170, ಶಾಂತಿ ಅಂಗಡಿಮನೆ, ಜೋಡು ಮಾರ್ಗ, ‘ಬಿ’ ಮೂಡ ಗ್ರಾಮ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ (4) ತಾಸೀರ್(31) ತಂದೆ: ದಿ/ ಎಸ್. ಮೊಹಮ್ಮದ್, ವಾಸ: ಮನೆ ನಂಬ್ರ #15-170, ಶಾಂತಿ ಅಂಗಡಿಮನೆ, ಜೋಡು ಮಾರ್ಗ, ‘ಬಿಮೂಡ’ ಗ್ರಾಮ, ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ ರವರನ್ನು ದಸ್ತಗಿರಿ ಮಾಡಿ ಅವರಿಂದ ಮೊಬೈಲ್ ಪೋನ್ ಗಳನ್ನು ಹಾಗೂ ಆರೋಪಿಗಳಿಂದ ರೂ 4,00,000/- ನಗದನ್ನು ಸ್ವಾಧೀನ ಪಡಿಸಿಕೊಳ್ಳಲಾಗಿದೆ.
ಸದ್ರಿ ಪ್ರಕರಣದ ಇತರ ಆರೋಪಿಗಳು ತಲೆಮರೆಸಿ ಕೊಂಡಿದ್ದು ಅವರ ದಸ್ತಗಿರಿಗೆ ಬಾಕಿ ಇರುತ್ತದೆ.





