Home Crime ಸುಳ್ಯ : ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು‌ ಆತ್ಮಹತ್ಯೆ….!!

ಸುಳ್ಯ : ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು‌ ಆತ್ಮಹತ್ಯೆ….!!

ಸುಳ್ಯ  : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಳು ಸಮೀಪ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮೃತಪಟ್ಟ ಮಹಿಳೆ ತಾಹಿರಾ ಬಿ ಎಲ್ ಎಂದು ತಿಳಿಯಲಾಗಿದೆ.

ಈ ಘಟನೆ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ಸಾರಂಶ : ಪಿರ್ಯಾದಿದಾರರಾದ ಅಬ್ದುಲ್‌ ಲತೀಫ್‌ .ಬಿ ಪ್ರಾಯ(61) ತಂದೆ: ಬಿ ಮಹಮ್ಮದ್‌ ವಾಸ: ಬೊಳುಬೈಲು ಮನೆ , ಜಾಲ್ಸೂರು ಗ್ರಾಮ ಸುಳ್ಯ ತಾಲೂಕು ಎಂಬವರ ದೂರಿನಂತೆ ಪಿರ್ಯಾದಿದಾರರ ದೊಡ್ಡ ಮಗಳು ಶ್ರೀಮತಿ ತಾಹಿರಾ .ಬಿ.ಎಲ್‌ ಎಂಬಾಕೆಯನ್ನು ಅಜ್ಜಾವರ ನಿವಾಸಿ ಲತೀಫ್‌.ಬಿ. ಹೆಚ್‌ ರವರಿಗೆ ಕಳೆದ ಏಳು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಮಗಳಿಗೆ ಎರಡು ಗಂಡು ಮತ್ತು ಒಂದು ಹೆಣ್ಣು ಮಗುವಿರುತ್ತದೆ. ದಿನಾಂಕ: 28.08.2025 ರಂದು ಮದ್ಯಾಹ್ನ 12.33 ಗಂಟೆಗೆ ಪಿರ್ಯಾದಿದಾರರ ಮೊಬೈಲ್‌ ಗೆ ಅಳಿಯ ಲತೀಪ್‌ ಪೋನ್‌ ಮಾಡಿ ತಾಹಿರಾ .ಬಿ.ಎಲ್‌ ಪ್ರಾಯ (27) ಮನೆಯ ಬೆಡ್‌ ರೂಮ್‌ನಲ್ಲಿ ನೇಣು ಬಿಗಿದುಕೊಂಡು ನೇತಾಡುತ್ತಿದ್ದಾಳೆಂದು ತಿಳಿಸಿದಾಗ ಪಿರ್ಯಾದಿದಾರರು ಮತ್ತು ಮೊದಲ ಮಗ ತೌಸಿಫ್‌ ಕೂಡಲೇ ಕಾರಿನಲ್ಲಿ ಮಗಳ ಮನೆಯಾದ ಜಯನಗರ ಎಂಬಲ್ಲಿಗೆ ಹೋಗಿ ನೋಡಲಾಗಿ ಮಗಳು ನೇಣು ಹಾಕಿರುವ ಹಗ್ಗವನ್ನು ತುಂಡು ಮಾಡಿ ಬೆಡ್‌ ರೂಮ್‌ನಲ್ಲಿ ಅಂಗಾತನೆ ಮಲಗಿಸಿರುವುದು ಕಂಡು ಬರುತ್ತದೆ. ಕೂಡಲೇ ಪಿರ್ಯಾದಿದಾರರು ಮತ್ತು ಮಗ ಕಾರಿನಲ್ಲಿ ಚಿಕಿತ್ಸೆ ಬಗ್ಗೆ ಕೆ.ವಿ.ಜಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ತಾಹಿರಾ .ಬಿ.ಎಲ್‌ ದಿನಾಂಕ:28.08.2025 ರಂದು ಸಮಯ 4.52 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ.

ಈ ಬಗ್ಗೆ ಸುಳ್ಯ ಪೊಲೀಸ್ ಠಾಣಾ ಯುಡಿಆರ್ 38/2025 ಕಲಂ:194(3)(iv) BNSS 2023 ಯಂತೆ ಪ್ರಕರಣ ದಾಖಲಾಗಿರುತ್ತದೆ.