Home Crime ಕುಂದಾಪುರ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು…!!

ಕುಂದಾಪುರ: ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು…!!

ಕುಂದಾಪುರ: ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರ ತಾಲುಕು ವಡೇರ ಹೊಬಳಿ ಗ್ರಾಮದ ಬಿಸಿ ರೋಡ್ ನ ಮನೆಯಲ್ಲಿ ನಡೆದಿದೆ.

ಮೃತರನ್ನು ಕುಂದಾಪುರ ತಾಲುಕು ವಡೇರ ಹೊಬಳಿ ಗ್ರಾಮದ ಬಿಸಿ ರೋಡ್ ನ ನಿವಾಸಿ ನಾಗರಾಜ (51) ಎಂದು ಗುರುತಿಸಲಾಗಿದೆ.

ಇವರು ಜನವರಿ 30 ರಂದು ಮನೆಯ ಬಾವಿಯೊಳಗಿನ ಸಬ್ ಮರಸಿಬಲ್ ಪಂಪ್ ಅನ್ನು ರಿಪೇರಿ ಮಾಡಲು ತೆಗೆಯಲು ಹೋದಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಯೊಳಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 05/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.