Home Latest ಮಾಹೆ ವಿಶ್ವ ವಿದ್ಯಾ ಲಯದ 8ನೇ ಕುಲಪತಿಯಾಗಿ ಡಾ| ಶರತ್ ಕೆ. ರಾವ್ ಅಧಿಕಾರ ಸ್ವೀಕಾರ

ಮಾಹೆ ವಿಶ್ವ ವಿದ್ಯಾ ಲಯದ 8ನೇ ಕುಲಪತಿಯಾಗಿ ಡಾ| ಶರತ್ ಕೆ. ರಾವ್ ಅಧಿಕಾರ ಸ್ವೀಕಾರ

ಮಣಿಪಾಲ: ಮಾಹೆ ವಿಶ್ವ ವಿದ್ಯಾ ಲಯದ 8ನೇ ಕುಲಪತಿಯಾಗಿ ಡಾ| ಶರತ್ ಕೆ. ರಾವ್ ಅಧಿಕಾರ ಸ್ವೀಕರಿಸಿದರು.

ಪ್ರಖ್ಯಾತ ಮೂಳೆತಜ್ಞರು ಹಾಗೂ ಶೈಕ್ಷಣಿಕ ಆಡಳಿತಗಾರರಾದ ಡಾ| ಶರತ್ ರಾವ್ ವೈದ್ಯಕೀಯ ಕ್ಷೇತ್ರದಲ್ಲಿ 4 ದಶಕಗಳ ಸುದೀರ್ಘ ಅನುಭವ ಹೊಂದಿದ್ದಾರೆ.

ಮಾರ್ಚ್‌ನಲ್ಲೇ ಇವರ ನೇಮಕಾತಿ ಘೋಷಿಸಲಾಗಿತ್ತು. ಮಾಹೆಯ ಶೈಕ್ಷಣಿಕ ಗುಣಮಟ್ಟವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಇವರ ನಾಯಕತ್ವ ಮಹತ್ವದ್ದಾಗಿದ್ದು ಈ ಮೂಲಕ ಸಂಸ್ಥೆಯ ನಾಯಕತ್ವ ದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ.

ಮಾಹೆ ಟ್ರಸ್ಟ್ ಅಧ್ಯಕ್ಷ ಡಾ | ರಂಜನ್ ಆರ್. ಪೈ, ಸಹ ಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಅವರು ಡಾ| ಶರತ್ ರಾವ್ ಅವರಿಗೆ ಶುಭ ಹಾರೈಸಿ, ಮಾಹೆಯ ಬಗ್ಗೆ ಅವರಿಗಿರುವ ಆಳವಾದ ಅರಿವು, ಎಲ್ಲರನ್ನು ಒಳಗೊಳ್ಳುವ ನಾಯಕತ್ವ ಹಾಗೂ ಶ್ರೇಷ್ಠತೆ ಸಾಧಿಸುವಲ್ಲಿ ಅವರಿಗಿರುವ ಬದ್ಧತೆಯು ಉನ್ನತ ಶಿಕ್ಷಣ ಮತ್ತು ಸಂಶೋಧನ ಸಂಸ್ಥೆಯಾಗಿ ಜಾಗತಿಕ ಮಟ್ಟದಲ್ಲಿಗೌರವ ಹೊಂದಿರುವ ಮಾಹೆಯ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.