Home Latest ಮಂಗಳೂರು : ಗುದದ್ವಾರದಲ್ಲಿ ಮೊಬೈಲಿಟ್ಟು ಜೈಲಿನೊಳಗೆ ಪ್ರವೇಶಿಸಿದ ಕೈದಿ…!

ಮಂಗಳೂರು : ಗುದದ್ವಾರದಲ್ಲಿ ಮೊಬೈಲಿಟ್ಟು ಜೈಲಿನೊಳಗೆ ಪ್ರವೇಶಿಸಿದ ಕೈದಿ…!

ಮಂಗಳೂರು : ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್‌ಜಾರ್ಜ್ ಆದ ಕೈದಿಯೊಬ್ಬ ಗುದದ್ವಾರದಲ್ಲಿ ಮೊಬೈಲ್ ಅಡಗಿಸಿಟ್ಟು ಜೈಲಿಗೆ ಪ್ರವೇಶಿಸುವಾಗ ಸಿಕ್ಕಿಬಿದ್ದ ಘಟನೆ ಬುಧವಾರ ನಡೆದಿದೆ.

 

ಎ.24ರಂದು ಮುಹಮ್ಮದ್ ತೋಹಿದ್ ಎಂಬ ಕೈದಿಯನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಿಸಲಾಗಿತ್ತು.

 

ಎ.29ರಂದು ಆಸ್ಪತ್ರೆಯಿಂದ ತೋಹಿದ್ ಡಿಸ್‌ಜಾರ್ಜ್ ಆಗಿದ್ದು, ಸಂಜೆ 5:15ರ ವೇಳೆ ಕೊಡಿಯಾಲ್‌ಬೈಲಿನ ಜಿಲ್ಲಾ ಕಾರಾಗೃಹಕ್ಕೆ ಕರೆ ತರಲಾಗಿತ್ತು. ಕಾರಾಗೃಹದ ಒಳಗೆ ಪ್ರವೇಶಿಸುವಾಗ ಕರ್ತವ್ಯ ದಲ್ಲಿದ್ದ ಕೆಎಸ್ ಐಎಸ್‌ಎಫ್ ಸಿಬ್ಬಂದಿಯು ಯಂತ್ರ ಬಳಸಿ ತಪಾಸಣೆ ನಡೆಸಿದಾಗ ಗುದದ್ವಾರದ ಬಳಿ ಶಬ್ದ ಕೇಳಿ ಬಂದಿದೆ.

 

ವಿಚಾರಿಸಿದಾಗ ಮೊಬೈಲ್ ಬಚ್ಚಿಟ್ಟುಕೊಂಡಿರುವುದಾಗಿ ಕೈದಿ ತೋಹಿದ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

 

ಕೈದಿಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಕೀ ಪ್ಯಾಡ್ ಮೊಬೈಲನ್ನು ಹೊರಗೆ ತೆಗೆದಿದ್ದಾರೆ ಎಂದು ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ.