ಹಿರಿಯಡ್ಕ ಸಮೀಪದ ದೊಂಡರಂಗಡಿಯಲ್ಲಿ ಬಾವಿ ಕಾಮಗಾರಿ ವೇಳೆ ನಡೆದ ದುರ್ಘಟನೆಯಲ್ಲಿ ಕಾರ್ಮಿಕನೋರ್ವ ಮೃತಪಟ್ಟ ಘಟನೆ ನಡೆದಿದೆ.
ಬೈರಂಪಳ್ಳಿ ಗ್ರಾಮದ ಹರೀಶ್ (45) ಅವರು ತಮ್ಮ ಸಹೋದ್ಯೋಗಿಗಳಾದ ಕೇಶವ ಹಾಗೂ ಸುಧಾಕರ್ ಜೊತೆ ಚಂದ್ರಕಾಂತ್ ಕಿಣಿ ಅವರ ಬಾವಿ ಕಾಮಗಾರಿ ಪರಿಶೀಲಿಸಲು ತೆರಳಿದ್ದರು. ಈ ವೇಳೆ ಬಾವಿಯ ಅಂಚಿನ ಮಣ್ಣು ಏಕಾಏಕಿ ಕುಸಿದ ಪರಿಣಾಮ ಮೂವರು ಬಾವಿಗೆ ಬಿದ್ದಿದ್ದಾರೆ.
ಹರೀಶ್ ಅವರು ಪಂಪಿಗೆ ಅಳವಡಿಸಿದ್ದ ಹಗ್ಗದ ಸಹಾಯದಿಂದ ಮೇಲಕ್ಕೆ ಬಂದರೆ, ಸುಧಾಕರ್ ಅವರು ಕೂಡ ಏಣಿಯ ಸಹಾಯದಿಂದ ಪಾರಾಗಿದ್ದಾರೆ. ಆದರೆ ಕೇಶವ ಅವರು ನೀರಿನಲ್ಲಿ ಕಾಣೆಯಾಗಿದ್ದು, ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಶೋಧ ನಡೆಸಿ ಮೇಲಕ್ಕೆತ್ತಿದ್ದಾರೆ. ತಲೆಗೆ ಕಲ್ಲು ಬಡಿದು ಗಂಭೀರ ಗಾಯಗೊಂಡಿದ್ದ ಕೇಶವ ಅವರು ಮೃತಪಟ್ಟಿರುವುದು ತಿಳಿದುಬಂದಿದೆ.
ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.




