Home Crime ಗಂಗೊಳ್ಳಿ : 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ…!!

ಗಂಗೊಳ್ಳಿ : 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ…!!

ಗಂಗೊಳ್ಳಿ : ಉಡುಪಿ ಜಿಲ್ಲೆಯ ಗಂಗೊಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 23 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ನಾಸೀರ ಖಾನ್ ಎಂದು ಗುರುತಿಸಲಾಗಿದೆ.

ಪ್ರಕರಣದ ವಿವರ : ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 33/2002 ಕಲಂ:498ಎ,504,506,(2) ಐಪಿಸಿ ಮತ್ತು 3,4,6 ವರದಕ್ಷಣೆ ಕಾಯ್ದೆ, ಸಿ ಸಿ ನಂಬರ್ 1457/2002ಪ್ರಕರಣದಲ್ಲಿ ಎಲ್.ಪಿ.ಸಿ ಆಸಾಮಿಯಾದ ನಾಸೀರ ಖಾನ್‌ (52 ವರ್ಷ) ತಂದೆ: ರೆಹಮತ್ತುಲ್ಲಾ ಖಾನ್‌ ವಾಸ: ಕೆರೆಹಿತ್ತಲು ,ಗಿಲಾರ ಗುಂಡಿ,ಆನಂದಪುರ ಪೋಸ್ಟ್‌ ಸಾಗರ ತಾಲೂಕು ,ಶಿವಮೊಗ್ಗ ಜಿಲ್ಲೆ. ಪ್ರಸ್ತುತ ಹಾಲಿ ವಿಳಾಸ ವಿಜಾಪುರ, ಸಂಪಿಗೆ, ಕಚ್ಚಿಗೆ ಬೈಲು ಗ್ರಾಮ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ ಎಂಬಾತನು ಸುಮಾರು 23 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದು, ಸದ್ರಿ ಆರೋಪಿತನನ್ನು ದಿನಾಂಕ 20/08/2025 ರಂದು ಠಾಣಾ ಸಿಬ್ಬಂದಿ ಹೆಚ್ ಸಿ ಕೃಷ್ಣ, ಪಿಸಿ, ಪ್ರಸನ್ನ, ಪಿಸಿ ಸಂದೀಪ್ ಕುರಾಣಿ ರವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ದಸ್ತಗಿರಿ ಮಾಡಿ ಮಾನ್ಯ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ.