Home Karkala News ಕಾರ್ಕಳ : ನಿಟ್ಟೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತ್ಯು

ಕಾರ್ಕಳ : ನಿಟ್ಟೆ ಅಪಘಾತದಲ್ಲಿ ಗಾಯಗೊಂಡಿದ್ದ ವಿದ್ಯಾರ್ಥಿನಿ ಮೃತ್ಯು

ಕಾರ್ಕಳ : ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಎ. 24ರಂದು ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿರುವ ಪ್ರೇರಣಾ ಮೂಲ್ಯ ಎ. 27ರಂದು ನಿಧನ ಹೊಂದಿದರು.

 

ಸಿಇಟಿ ಪರೀಕ್ಷೆ ಬರೆದು ತಂದೆಯೊಂದಿಗೆ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಕಾರ್ಕಳದಿಂದ ನಿಟ್ಟೆಯತ್ತ ಸಾಗುತ್ತಿದ್ದ ನಿಟ್ಟೆ ಇಂಜೀನಿಯರಿಂಗ್‌ ಕಾಲೇಜು ವಿದ್ಯಾರ್ಥಿಯ ಕಾರು ಡಿಕ್ಕಿ ಹೊಡೆದಿತ್ತು.

ಡಿಕ್ಕಿಯ ರಭಸಕ್ಕೆ ಬೈಕ್‌ ಎಸೆಯಲ್ಪಟ್ಟಿದ್ದು ನವೀನ್‌ಚಂದ್ರ ಹಾಗೂ ಪ್ರೇರಣಾ ಇಬ್ಬರಿಗೂ ಗಂಭೀರ ಸ್ವರೂಪದ ಗಾಯವಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ನವೀನ್‌ಚಂದ್ರ ಅಂದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪ್ರೇರಣಾ ಅವರು ಸೋಮವಾರ ಕೊನೆಯುಸಿರೆಳೆದರು.

ವಿದ್ಯಾರ್ಥಿಗಳ ಅಜಾಗರೂಕತೆ, ಬೇಜವಾಬ್ದಾರಿತನಕ್ಕೆ ಒಂದೇ ಮನೆಯ ಇಬ್ಬರು ಸಾವನ್ನಪ್ಪುವಂತಾಯಿತು. ತಂದೆ, ಏಕೈಕ ಮಗಳ ಸಾವು ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಸ್ಥಳೀಯರ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.