ಶಂಕರನಾರಾಯಣ: ದೇವಸ್ಥಾನಗಳಲ್ಲಿಯೂ ಕಳ್ಳರ ದಾಳಿ ಮುಂದುವರಿದಿರುವ ಘಟನೆ ಶಂಕರನಾರಾಯಣದಲ್ಲಿ ಬೆಳಕಿಗೆ ಬಂದಿದೆ.
ಆಜ್ರಿ ಸಮೀಪದ ಉಮಾಮಹೇಶ್ವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನವಾಗಿರುವ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರ ನಾಗರಾಜ ಶೆಟ್ಟಿ ಅವರು ಪ್ರತಿದಿನದಂತೆ ದಿನಾಂಕ 20-04-2026ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ದೇವಸ್ಥಾನದ ಬಾಗಿಲು ತೆರೆಯಿ, ಆಫೀಸ್ ರೂಮ್‌ನಲ್ಲಿ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ದೇವಸ್ಥಾನದ ಹೊರ ಪೌಳಿಯಲ್ಲಿ ಇಟ್ಟು ಸ್ವಚ್ಛತಾ ಕಾರ್ಯಕ್ಕೆ ತೆರಳಿದ್ದರು.
ಆದರೆ ಬೆಳಿಗ್ಗೆ ಸುಮಾರು 8 ಗಂಟೆ ವೇಳೆಗೆ ವಾಪಸ್ಸು ಬಂದು ನೋಡಿದಾಗ ಹುಂಡಿ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕೂಡಲೇ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ ಬೆಳಿಗ್ಗೆ 7:56ರ ಸುಮಾರಿಗೆ ಹೆಲ್ಮೆಟ್ ಧರಿಸಿದ ವ್ಯಕ್ತಿಯೊಬ್ಬ ದೇವಸ್ಥಾನದ ಪೌಳಿಗೆ ಬಂದು ಹುಂಡಿಯನ್ನು ಕದ್ದೊಯ್ದಿರುವುದು ದೃಶ್ಯದಲ್ಲಿ ಪತ್ತೆಯಾಗಿದೆ.
ಕಳ್ಳತನಗೊಂಡ ಹುಂಡಿಯಲ್ಲಿ ಸುಮಾರು 10 ಸಾವಿರ ರೂಪಾಯಿ ಹಣವಿದ್ದುದಾಗಿ ತಿಳಿದುಬಂದಿದೆ.
ಈ ಸಂಬಂಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ.





